Monday, July 15, 2024
Homeಬೆಳ್ತಂಗಡಿನಾಪತ್ತೆಯಾಗಿದ್ದ ಎಣ್ಮೂರು ಬೈದರ್ಕಳ ಗರಡಿಯ ದರ್ಶನ ಪಾತ್ರಿ ಗಿರೀಶ್‌ ಮೃತದೇಹ ಪತ್ತೆ

ನಾಪತ್ತೆಯಾಗಿದ್ದ ಎಣ್ಮೂರು ಬೈದರ್ಕಳ ಗರಡಿಯ ದರ್ಶನ ಪಾತ್ರಿ ಗಿರೀಶ್‌ ಮೃತದೇಹ ಪತ್ತೆ

ಪುಂಜಾಲಕಟ್ಟೆ: ನಿಗೂಢ ನಾಪತ್ತೆಯಾಗಿದ್ದ ಎಣ್ಮೂರು ಬೈದರ್ಕಳ ಗರಡಿಯ ಕೋಟಿ ದರ್ಶನ ಪಾತ್ರಿ ಗಿರೀಶ್‌ ಮೃತದೇಹ ಪತ್ತೆಯಾಗಿದೆ. ಆಟೊ ರಿಕ್ಷಾ ಚಾಲಕರಾಗಿದ್ದ ಗಿರೀಶ್‌ ಬುಧವಾರ ರಾತ್ರಿಯಿಂದ ನಿಗೂಢ ನಾಪತ್ತೆಯಾಗಿದ್ದು, ಗುರುವಾರ ಅವರ ಆಟೊ ರಿಕ್ಷಾ ಅಡ್ಡೂರು ಪೊಳಲಿ ಸೇತುವೆಯಲ್ಲಿ ಚಾಲನೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರ್‌ ಬಾಬು ಪೂಜಾರಿ ಅವರ ಪುತ್ರ ಗಿರೀಶ್‌ (37) ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರ ಸಹಕಾರದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರ ಕಾರ್ಯಾಚರಣೆಯಲ್ಲಿ ಶವ ಪತ್ತೆಯಾಗಿದೆ.
ದೈವ ಚಾಕಿರಿಯ ಜೊತೆಗೆ ಜೀವನೋಪಾಯಕ್ಕಾಗಿ ಆಟೊ ಚಾಲನೆಯ ಕೆಲಸ ಮಾಡುತ್ತಿದ್ದ ಗಿರೀಶ್‌ ಬಜಪೆ ವಿಮಾನ ನಿಲ್ದಾಣಕ್ಕೆ ಬಾಡಿಗೆ ಇದೆ ಎಂದು ಹೇಳಿ ತಡರಾತ್ರಿ ಎರಡು ಗಂಟೆಗೆ ರಿಕ್ಷಾದಲ್ಲಿ ಹೊರಟವರು ಬಳಿಕ ನಾಪತ್ತೆಯಾಗಿದ್ದರು. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಬಜಪೆ ಪೊಲೀಸರು ಅನುಮಾನಾಸ್ಪದವಾಗಿ ಚಾಲನೆಯಲ್ಲೇ ನಿಂತಿದ್ದ ರಿಕ್ಷಾವನ್ನು ಪರಿಶೀಲಿಸಿದರು. ಪರಿಸರದಲ್ಲಿ ಹುಡುಕಿದರೂ ಚಾಲಕನ ಪತ್ತೆಯಾಗಲಿಲ್ಲ. ಬಳಿಕ ರಿಕ್ಷಾದಲ್ಲಿ ಸಿಕ್ಕಿದ ದಾಖಲೆಗಳ ಆಧಾರದಲ್ಲಿ ಪೊಲೀಸರು ಅವರ ಮನೆಗೆ ಮಾಹಿತಿ ನೀಡಿದ್ದರು. ಮೃತರ ಪತ್ನಿ ತಾರಾ ಪೂಂಜಾಲಕಟ್ಟೆ ಪೊಲೀಸ್‌ ಠಾಣೆಗೆ ನಾಪತ್ತೆಯ ಬಗ್ಗೆ ದೂರು ನೀಡಿದ್ದರು.

RELATED ARTICLES
- Advertisment -
Google search engine

Most Popular