Thursday, November 7, 2024
Homeಪುತ್ತೂರುನದಿಯಲ್ಲಿ ಮೊಸಳೆ ಮೃತದೇಹ ಪತ್ತೆ: ಸಾವಿನ ಕಾರಣ ನಿಗೂಢ

ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ: ಸಾವಿನ ಕಾರಣ ನಿಗೂಢ

ಕಡಬ: ಕುಮಾರಧಾರಾ ನದಿಯ ಪಂಜ ಕಡಬ ಸಂಪರ್ಕ ರಸ್ತೆಯ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆಯೊಂದರ ಮೃತದೇಹ ಪತ್ತೆಯಾಗಿದೆ. ಸುಮಾರು 2 ವರ್ಷದ ಮೊಸಳೆಯ ಮೃತದೇಹ ನದಿ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರು ಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮೊಸಳೆಯ ಸಾಮಾನ್ಯ ಜೀವಿತಾವಧಿ ಐವತ್ತರಿಂದ ಅರುವತ್ತು ವರ್ಷ ಇರುತ್ತದೆ. ಆದರೆ ಇಲ್ಲಿ ಮೃತಪಟ್ಟಿರುವ ಮೊಸಳೆಯ ವರ್ಷ ಎರಡು ವರ್ಷ ಎಂದು ಅಂದಾಜಿಸಲಾಗಿದೆ. ನದಿಯಲ್ಲಿ ನೀರಿನ ಒಳಹರಿಸುವ ಕಡಿಮೆಯಾಗಿದೆ. ಸೂರ್ಯನ ಪ್ರಖರತೆಗೆ ಅಲ್ಲಲ್ಲಿ ಸಂಗ್ರಹವಾಗಿರುವ ನೀರು ಬಿಸಿಯೇರಿ ಮೊಸಳೆ ಸಾವನ್ನಪ್ಪಿರಬಹುದೇ? ಎಂಬ ಶಂಕೆ ವ್ಯಕ್ತವಾಗಿದೆ. ಅಥವಾ ನೀರು ಕಲುಷಿತಗೊಂಡು ಮೊಸಳೆ ಸಾವಿಗೀಡಾಗಿದೆಯೇ? ಎಂಬ ಸಂದೇಹ ವ್ಯಕ್ತವಾಗಿದೆ. ಸ್ಥಳಕ್ಕೆ ಪಂಜ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ. ಮೊಸಳೆ ಸಾವಿಗೀಡಾಗಿರುವಲ್ಲಿ ನದಿ ನೀರು ಹರಿಯುತ್ತಿದೆ. ಹೀಗಾಗಿ ನದಿ ನೀರು ಬಿಸಿಯಾಗಿ ಸಾವಿಗೀಡಾದ ಸಂದರ್ಭ ಕಡಿಮಯಿದೆ. ಮೃತ ಮೊಸಳೆಯ ದೇಹದಲ್ಲಿ ಗಾಯಗಳಾಗಿಲ್ಲ. ಹೀಗಿರುವಾಗ ಇತರ ಮೊಸಳೆಗಳೊಂದಿಗೆ ಕಾಳಗ ನಡೆದು ಮೃತಪಟ್ಟಿರುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಮೊಸಳೆ ಸಾವಿಗೆ ಕಾರಣವನ್ನು ಮೊಸಳೆಯ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಪತ್ತೆ ಹಚ್ಚಬಹುದು ಎಂದು ಅರಣ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular