Wednesday, July 24, 2024
Homeರಾಷ್ಟ್ರೀಯವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಸತ್ತ ಹಾವು ಪತ್ತೆ: ಹಲವರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಸತ್ತ ಹಾವು ಪತ್ತೆ: ಹಲವರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಪಾಟ್ನಾ: ಖಾಸಗಿ ಮೆಸ್‌ನಿಂದ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾದ ಆಹಾರದಲ್ಲಿ ಹಾವಿನ ಮರಿ ಇದ್ದುದು ಪತ್ತೆಯಾಗಿದ್ದು, ಈ ಆಹಾರವನ್ನು ತಿಂದ ಹಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಬಿಹಾರದ ಬಂಕಾದಲ್ಲಿ ಈ ಘಟನೆ ನಡೆದಿದೆ.
ಸುಮಾರು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಹಾರ ಸೇವಿಸಿದ ಬಳಿಕ ಕೆಲವು ವಿದ್ಯಾರ್ಥಿಗಳಿಗೆ ವಾಂತಿ ಬೇಧಿಯಾಗಿದೆ. ಈ ವೇಳೆ ಪರಿಶೀಲಿಸಿದಾಗ ಆಹಾರದಲ್ಲಿ ಸತ್ತ ಹಾವಿನ ಮರಿ ಇರುವುದು ಪತ್ತೆಯಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಹಾಸ್ಟೆಲ್‌ಗೆ ವಾಪಾಸಾಗಿದ್ದಾರೆ ಎನ್ನಲಾಗಿದೆ. ಈ ಕಾಲೇಜಿನಲ್ಲಿ ಇದೇ ರೀತಿಯ ಪ್ರಕರಣ ಈ ಹಿಂದೆಯೂ ವರದಿಯಾಗಿತ್ತು ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular