ಕಳತ್ತೂರು : ಶ್ರೀ ಬ್ರಹ್ಮ ಬೈದೇರುಗಳ ಕಾಲಾವಧಿ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿದೆ. ಶ್ರೀ ಬ್ರಹ್ಮ ಬೈದೇರುಗಳ ವರ್ಷಾವಧಿ ನೇಮೋತ್ಸವವು ಡಿ.20 ರಂದು ಮೊದಲ್ಗೊಂಡು ಡಿ.23 ರ ವರೆಗೆ ನಡೆಯಲಿದೆ.
ಕಾರ್ಯಕ್ರಮದ ವಿವರ
ತಾ. 20-12-2024ನೇ ಶುಕ್ರವಾರ ಬೆಳಿಗ್ಗೆ ನವಕ ಪ್ರಧಾನ ಹೋಮ ರಾತ್ರಿ : ಗರಡಿ ಪ್ರವೇಶ
ತಾ. 21-12-2024ನೇ ಶನಿವಾರ ರಾತ್ರಿ ನೈವೇದ್ಯ ಸೇವೆ
ತಾ. 22-12-2024ನೇ ಆದಿತ್ಯವಾರ ಮಧ್ಯಾಹ್ನ ಗಂಟೆ 12-00ಕ್ಕೆ ಅನ್ನಸಂತರ್ಪಣೆ ,ರಾತ್ರಿ ಗಂಟೆ 6-30ರಿಂದ ಶ್ರೀ ಬ್ರಹ್ಮ ಬೈದೇರುಗಳ ಜಾತ್ರೆ (ನೇಮೋತ್ಸವ) ರಾತ್ರಿ ಗಂಟೆ 7-30ಕ್ಕೆ : ಅನ್ನಸಂತರ್ಪಣೆ
ತಾ. 23-12-2024ನೇ ಸೋಮವಾರ ಬೆಳಿಗ್ಗೆ ಗಂಟೆ 9-00ಕ್ಕೆ ಮಾಯಾಂದಾಲ್ ದೇವಿಯ ನೇಮ, ಶುದ್ಧ ಕಲಶ, ನೈವೇದ್ಯ ಸೇವೆ ಜರಗಲಿದೆ.
ನೇಮೋತ್ಸವದ ಸಂಪೂರ್ಣ ಹೂವಿನ ಅಲಂಕಾರವನ್ನು ರಶ್ಮಿ ವಿಜಯಾನಂದ, ಬೋಳಾರ ಮಂಗಳೂರು ಮತ್ತು ನೇಮೋತ್ಸವದ ದಿನ ಪಂಚಕಜ್ಜಾಯ ಸೇವೆಯನ್ನು ರೇಷ್ಮಾ ಪರಮೇಶ ಪೂಜಾರಿ, ಗರಡಿಮನೆ, ಕಳತ್ತೂರು ವಹಿಸಿಕೊಂಡಿದ್ದಾರೆ.