ನಂದಳಿಕೆ: ಇಂಚರ ಸೇವಾ ಬಳಗ (ರಿ.) ನಂದಳಿಕೆ ವತಿಯಿಂದ ಸಹಾಯಧನ ಹಸ್ತಾಂತರ, ಗೌರವಾರ್ಪಣೆ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇಂಚರ ಸಂಭ್ರಮವು 30-11-2024 ಶನಿವಾರ, ಸಂಜೆ 6 ಗಂಟೆಗೆ ಬೋರ್ಡ್ ಶಾಲಾ ರಂಗಮಂದಿರದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಸಮಾಜ ಸೇವಕ ರವಿ ಕಟಪಾಡಿಯವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಸಂಜೆ 6.00ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ, 6.30ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 8.00ರಿಂದ ತುಳುವ ಸಿರಿ ಕಲಾವಿದೆರ್ ನಂದಳಿಕೆ ಅಭಿನಯದ ಕೈತಲ್ ಪೋವೊಡ್ಚಿ ವಿನೂತನ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.