ಕಾರ್ಕಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ, ಕರ್ನಾಟಕ ಜಿಲ್ಲಾ ಸಂಸ್ಥೆ, ಉಡುಪಿ ಸ್ಥಳೀಯ ಸಂಸ್ಥೆ, ಕಾರ್ಕಳ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ 2024 ದಿನಾಂಕ 14-12-2024 ಶನಿವಾರ ಹಾಗೂ 15-12-2024 ಆದಿತ್ಯವಾರ ಎಸ್.ವಿ.ಟಿ ವಿದ್ಯಾಸಂಸ್ಥೆ ಕಾರ್ಕಳದಲ್ಲಿ ನಡೆಯಲಿದೆ.
ದಿನಾಂಕ 14-12-2024, ಶನಿವಾರ ಸಂಜೆ ಗಂಟೆ 3.15ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ. ಶ್ರೀ ಪಿ. ಜಿ. ಆರ್. ಸಿಂಧ್ಯಾ ಮಾನ್ಯ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಜ್ಯ ಸಂಸ್ಥೆ, ಕರ್ನಾಟಕ ಇವರು ಕಾರ್ಯಕ್ರಮ ಉದ್ಘಾಟಿಸಲಿರುವರು.
ದಿನಾಂಕ 15-12-2024, ಆದಿತ್ಯವಾರ ಸಂಜೆ ಗಂಟೆ 3.00 ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಸಾಧಕ ಸ್ಕೌಟ್ಸ್ ಗೈಡ್ಸ್ ಮಹನೀಯರಿಗೆ, ರಾಜ್ಯಮಟ್ಟದಲ್ಲಿ, ವಿಭಾಗಮಟ್ಟದಲ್ಲಿ ಭಾಗವಹಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ, ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಮತ್ತು ತರಬೇತಿ ನೀಡಿದ ಶಿಕ್ಷಕ ಬಂಧುಗಳಿಗೆ ವಿಶೇಷ ಗೌರವ ಸನ್ಮಾನ ಮಾಡಲಾಗುವುದು.