Wednesday, January 15, 2025
Homeಧಾರ್ಮಿಕಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಸ್ವರ್ಣ ಪಲ್ಲಕಿ ಸಮರ್ಪಣೆ

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಸ್ವರ್ಣ ಪಲ್ಲಕಿ ಸಮರ್ಪಣೆ

ಕಟೀಲು : ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಭಕ್ತಾಧಿಗಳ ಸಹಕಾರದಲ್ಲಿ ಸುಮಾರು 2 ಕೋಟಿ ರೂ . ವೆಚ್ಚದಲ್ಲಿ ನಿರ್ಮಿಸಲಾಗಿರುವ ಚಿನ್ನದ ಪಲ್ಲಕಿಯನ್ನು ಕಟೀಲು ಕ್ಷೇತ್ರದಿಂದ ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ದು ದೈವಸ್ಥಾನದಲ್ಲಿ ಸಮರ್ಪಿಸಲಾಯಿತು. ಏ.26ರಂದು ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡ ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ,ನಾಗಮಂಡಲೋತ್ಸವವು ನಡೆಯಲಿದೆ. ಸುಮಾರು ಎರಡು ಕೆಜಿಯಷ್ಟು ಬಂಗಾರವನ್ನು ಭಕ್ತಾದಿಗಳೇ ನೀಡಿದ್ದಾರೆ. ಕಟೀಲಿನಿಂದ ಶಿಬರೂರಿಗೆ ಸಾಗಿದ ಭವ್ಯ ಮೆರವಣಿಗೆಗೆಯಲ್ಲಿ ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ, ವೇದವ್ಯಾಸ ತಂತ್ರಿ, ಕಟೀಲಿನ ಆಸ್ರಣ್ಣವೃಂದ , ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ, ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular