ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿ ಕಾಂಗ್ರೆಸ್ ವಿರುದ್ಧ ಬಾಲಿವುಡ್ ನಟ ಆಮಿರ್ ಖಾನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಆಡಳಿತಾರೂಢ ಬಿಜೆಪಿ ಗುರಿಯಾಗಿಸಿಕೊಂಡು ಆಮೀರ್ ಖಾನ್ ಮಾತನಾಡಿರುವಂತೆ ಕಂಡುಬರುವ ಡೀಪ್ ಫೇಕ್ ವಿಡಿಯೋ ಜನರೇಟ್ ಮಾಡಲಾಗಿದೆ. ವಿವಾದಿತ ಜಾಹೀರಾತಿನಲ್ಲಿ ಆಮೀರ್ ಖಾನ್ ಇರುವ ದೂರದರ್ಶನ ಕಾರ್ಯಕ್ರಮ `ಸತ್ಯಮೇವ ಜಯತೇ’ ಸಂಚಿಕೆಯ ಭಾಗವನ್ನು ಅಳವಡಿಸಲಾಗಿದೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಜಮೆ ಮಾಡುವ ಬಿಜೆಪಿಯ ಭರವಸೆಯನ್ನು ಆಮಿರ್ ಖಾನ್ ಟೀಕಿಸಿರುವಂತೆ ವಿಡಿಯೋ ತಯಾರಿಸಲಾಗಿದೆ. ಈ ಡೀಪ್ ಫೇಕ್ ವಿಡಿಯೋ ಬಗ್ಗೆ ಕ್ರಮಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಆಮೀರ್ ಖಾನ್ ತಮ್ಮ 35 ವರ್ಷಗಳ ವೃತ್ತಿ ಜೀವನದಲ್ಲಿ ಯಾವುದೇ ರಾಜೀಯ ಪಕ್ಷದ ಪರವಾಗಿ ಧ್ವನಿಗೂಡಿಸಿಲ್ಲ. ಜೊತೆಗೆ ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಜಾಗೃತಿ ಅಭಿಯಾನಗಳಲ್ಲಿ ಸಾರ್ವಜನಿಕ ಜಾಗೃತಿಗೆ ಖಾನ್ ಶ್ರಮಿಸಿದ್ದಾರೆ ಎಂದು ಖಾನ್ ಅವರ ವಕ್ತಾರರು ತಿಳಿಸಿದ್ದಾರೆ.