ನಾರಾವಿ: ಬಾಹುಬಲಿ ಮೂರ್ತಿಯ ಫೋಟೊ ವಿಕೃತಗೊಳಿಸಿ ಜೈನ ಧರ್ಮದವನ್ನು ಅವಹೇಳನ ಮಾಡಿರುವ ನಾರಾವಿಯ ಮಹಿಳೆ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾರಾವಿ ಗ್ರಾಮದ ವಿಜಯಾ ಎಂಬಾಕೆ ಡಿ. 20ರಂದು ತನ್ನ ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಬಾಹುಬಲಿಯ ವಿಕೃತ ಚಿತ್ರಗಳನ್ನು ಫೇಸ್‌ಬುಕ್ ಖಾತೆ ಮತ್ತು ವಾಟ್ಸಫ್ ಮೂಲಕ ಹರಿಯಬಿಟ್ಟು ಜೈನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಕುರಿತು ಆಕೆಯ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.