ದಿನಾಂಕ12-12-2025 ರಂದು ಬೆಳಗಾವಿ ಸುರ‍್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ತಿನ ಕಲಾಪದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ ರವರು , ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು , ಹೆಚ್ಚುವರಿ ವಸತಿ ನಿಲಯಗಳ ಬೇಡಿಕೆ ಇದ್ದು ಸರ್ಕಾರ ಇದನ್ನು ಪರಿಗಣಿಸುವುದೇ ಎಂಬ ಪ್ರಶ್ನೆಗೆ ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ| ಹೆಚ್ ಸಿ. ಮಹದೇವಪ್ಪರರು ಈ ರೀತಿ ಉತ್ತರಿಸಿದ್ದಾರೆ .
ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾತಿ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾಗುತ್ತಿದ್ದು ವಿದ್ಯಾರ್ಥಿ ನಿಲಯಗಳ ಗರಿಷ್ಠ ಸಾಮರ್ಥ್ಯನುಸಾರ ಪ್ರವೇಶಾವಕಾಶ ಕಲ್ಪಿಸುವುದರ ಜೊತೆಗೆ ಹೆಚ್ಚುವರಿ ಬಾಡಿಗೆ ಕಟ್ಟಡಗಳನ್ನು ಪಡೆದು ಅರ್ಜಿಗಳು ಸಲ್ಲಿಸುತ್ತಿರುವ ಎಲ್ಲಾ ಪ. ಜಾತಿ ವಿದ್ಯಾರ್ಥಿಗೆ ಪ್ರವೇಶಾತಿ ಕಲ್ಪಿಸಲು ಕ್ರಮವಹಿಸಲಾಗುತ್ತಿದೆ . ಹಾಗೂ ವಿದ್ಯಾರ್ಥಿ ನಿಲಯದಲ್ಲಿ ಖಾಲಿ ಇರುವ ವಾರ್ಡ್ನ್ ಹುದ್ದಗೆಳಿಗೆ ನೇರ ನೇಮಕಾತಿ ಕೋಟಾದಡಿ 232 ವಾರ್ಡ್ನ್ ಹುದ್ದೆಗೆ ಭರ್ತಿ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು ಪರಿಶೀಲನೆಯಲ್ಲಿದೆ ಎಂದು ಸಚಿವರು ಉತ್ತರಿಸಿದ್ದಾರೆ .



