ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ೨೦೨೪ ಆಗಸ್ಟ್ ಸಪ್ಟೆಂಬರ್ ತಿಂಗಳಿಂದ ಮಾಸಿಕ ಪಿಂಚಣಿ ಸಿಗುತ್ತಿಲ್ಲ ಕೂಡಲೇ ಪಿಂಚಣಿ ಹಣ ಬಿಡುಗಡೆಗೊಳಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ವಸಂತ ಆಚಾರಿ ಯವರು ಕಲ್ಯಾಣ ಮಂಡಳಿಯನ್ನು ಒತ್ತಾಯಿಸಿದ್ದಾರೆ. ಅವರು ಆಗಸ್ಟ್ ೧೪ರಂದು ಮೂಡಬಿದ್ರೆ ವಿಧಾನಸಭಾ ಮುಂದುಗಡೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಅವರು ಮುಂದುವರಿದು ೨೦೨೪ ಅಕ್ಟೋಬರ್ ೧ ರಿಂದ ೧೬ ರ ತನಕ ರಾಜ್ಯಪಾಲ ಪ್ರಚಾರಾಂದೋಲನ ನಡೆಸಿ ೧೪ ೧೬ ರಂದು ಪ್ರತಿಭಟನಾ ಹೋರಾಟ ನಡೆಸಲಾಗಿದೆ. ೧೯೯೬ರ ಕೇಂದ್ರ ಮಟ್ಟದ ಕಾಯ್ದೆ ಮತ್ತು ಪೆಸ್ ಕಾಯಿದೆ ಎನ್ನು ರಕ್ಷಿಸಬೇಕು ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ ೧೯೭೯ರ ಉಳಿಸಿ ಹಾಗೂ ಬಲಪಡಿಸಬೇಕು ಅವರಿಗೆ ಎಲ್ಲಾ ರೀತಿಯ ರಕ್ಷಣೆ ನೀಡಬೇಕು. ನಿರ್ಮಾಣ ಸಾಮಾಗ್ರಿಗಳು ಮತ್ತು ಸಲಕರಣೆಗಳ ಮೇಲಿನ ಜಿಎಸ್ ಟಿಯನ್ನು ಕಡಿಮೆ ಮಾಡಬೇಕು ಎಂದರು ರಾಜ್ಯದಲ್ಲಿ ೨೦ ೨೨ ೨೩ ೨೪ರ ವಿದ್ಯಾರ್ಥಿ ವೇತನ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಬಂದಿಲ್ಲ ಕೂಡಲೇ ಧನ ಸಹಾಯ ಪಾವತಿಸಬೇಕು ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೊಂದಾಣಿ ಅರ್ಜಿಗಳನ್ನು ತಿರಸ್ಥರಿಸಬಾರದು ಬಾಕಿ ಇರುವ ಅರ್ಜಿಗಳ ಕೂಡಲೇ ವಿಲೇಮಾರಿ ಮಾಡಬೇಕು ಟೆಂಡರ್ ಆಧಾರಿತ ಎಲ್ಲಾ ಖರೀದಿ ವ್ಯವಹಾರಗಳನ್ನು ನಿಲ್ಲಿಸಬೇಕು ಶಿಟ್ ಹಾಗೂ ಇತರೆ ಖರೀದಿಗಳಲ್ಲಿ ಅವ್ಯವಹಾರಗಳು ನಡೆದಿದ್ದು ಈ ಬಗೆ ನ್ಯಾಯಾಂಗ ತನಿಖೆಯಾಗಬೇಕು ಹೊಸ ತಾಂತ್ರಿಂಶದಲ್ಲಿನ ತಾಂತ್ರಿಕ ತೊಂದರೆಗಳು ಹಾಗೂ ಸರ್ವರ್ ಸಮಸ್ಯೆಗಳನ್ನು ಪರಿಹರಿಸಬೇಕು ಕಲ್ಯಾಣ ಮಂಡಳಿಯನ್ನು ಮತ್ತು ಸಲಹಾ ಮಂಡಳಿಯನ್ನು ಪುನರ್ ರಚಿಸಿ ಕೇಂದ್ರ ಕಾರ್ಮಿಕರ ಸಂಘಗಳಿಗೆ ಪ್ರತಿನಿದ್ಯ ನೀಡಬೇಕು ಪಿಂಚಾಣಿದಾರರ ಅರ್ಜಿ ಸಲ್ಲಿಸಲು ಇರುವ ಪ್ರಾಯದ ದಿನಾಂಕದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಅವರು ಒತ್ತಾಯಿಸಿದರು
ಪೆಡರೇಶನ್ ತಾಲೂಕು ಕಾರ್ಯದರ್ಶಿ ಶಂಕರ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ರಾಧಾ ಸ್ವಾಗತಿಸಿದರು. ಕೃಷ್ಣಪ್ಪ ನಡಿಗುಡ್ಡೆ ಧನ್ಯವಾದಗೈದರು.
ತಹಶೀಲ್ದಾರರ ಮುಖಾಂತರ ರಾಜು ಮತ್ತು ಕೇಂದ್ರ ಸರಕಾರಕ್ಕೆ ಮನವಿ ನೀಡಲಾಯಿತು. ಪ್ರತಿಭಟನೆ ಪ್ರದರ್ಶನ ನೇತೃತ್ವವನ್ನು ಮುಂದಾಳುಗಳಾದ ಕೃಷ್ಣಪ್ಪ ಬಿರಾವು, ಸೀತಾರಾಮ ಶೆಟ್ಟಿ, ಸಂಜೀವ ಪೂಜಾರಿ, ಜಯಾನಂದ ಪೂಜಾರಿ, ದಿವಾಕರ ನಿಡ್ಡೋಡಿ,ಸುಂದರ ನಿಡ್ಡೋಡಿ, ಶ್ರೀಧರ ಆಚಾರಿ, ಪಾಂಡು ಪೂಜಾರಿ ಸದಾನಂದ ಮಾರ್ನಾಡು ಉಪಸ್ಥಿತರಿದ್ದರು.
ಕಟ್ಟಡ ಕಾರ್ಮಿಕರ ಪಿಂಚಣಿ ಬಿಡುಗಡೆಗೆ ಆಗ್ರಹ: ವಸಂತ ಆಚಾರಿ
RELATED ARTICLES