ನರಿ ಕೊಂಬು ಗ್ರಾಮದ ನಾಯಿಲ .ಮಾರ್ಲಿ ಮಾರು. ಕೊ ಮೆ .ರಂಗೇಲು ಬೋಂಡಾಲ ಮೊದಲಾದ ಪ್ರದೇಶದ ರೈತ ಪರಿವರ್ಗ ಪ್ರತಿ ವರ್ಷ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಆಲಡ್ಕ ಡೆಂಜೀಪಾಡಿ ನಾಯಿಲ ತನಕ ಹರಿದು ಹೋಗುವ ತೋಡಿನಲ್ಲಿ ಹೂಳು ತುಂಬಿದರ ಪರಿಣಾಮ ತಮ್ಮ ಹೊಲ ಗದ್ದೆಗಳಲ್ಲಿ ನೀರು ನಿಂತು ಕಳೆದ ನಾಲ್ಕು ವರ್ಷಗಳಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು ಈ ಬಗ್ಗೆ ಬಿಸಿ ರೋಡಿನಲ್ಲಿ ಜರಗಿದ ಜನತಾದರ್ಶನ ಕಾರ್ಯಕ್ರಮದಲ್ಲಿ ರೈತರ ಪರ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಲಿಖಿತ ಮನವಿಯನ್ನು ನೀಡಿದ್ದು ಮಹಜರು ನಡೆಸಲು ನರಿ ಕೊಂಬು ಗ್ರಾಮ ಪಂಚಾಯಿತಿ ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಆಲಡ್ಕದಲ್ಲಿ ನೂತನ ಸೇತುವೆ ನಿರ್ಮಾಣಗೊಂಡು ಅದರ ಅಡಿಯಲ್ಲಿ ಕಲ್ಲು ಮಣ್ಣು ಶೇಖರಣೆ ಹಾಗೆ ಉಳಿದಿದ್ದು ಹಾಗೂ ರಾಜ ಕಾಲುವೆ ಒತ್ತು ವರಿಯನ್ನು ಸರಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದರು ರೈತ ಸಂಘದ ಕಾರ್ಯದರ್ಶಿ ಸುದೇಶ್ ಮೈಯ್ಯ ಭೋಜ ಮೂಲ್ಯ ಲಕ್ಷ್ಮಣ ಭಾಸ್ಕರ್ ಸೀತಾರಾಮ ಅಶೋಕ ಜಯಂತ ಕೃಷ್ಣಪ್ಪ ವೆಂಕಪ್ಪ ಮೊದಲಾದವರು ರೈತರಿಗಾಗುವ ಕಷ್ಟದ ಬಗ್ಗೆ ಮಾಹಿತಿ ನೀಡಿದರು. ನರಿ ಕೊಂಬು ಗ್ರಾಮದ ನೂರಾರು ಎಕ್ಕರೆ ರೈತರ ಕೃಷಿ ಭೂಮಿಯನ್ನು ತೋಡಿನ ಹೂಳೆತ್ತುವ ಮೂಲಕ ಅನ್ನದಾತನ ಬಹುಕಾಲರ ಸಮಸ್ಯೆಯನ್ನು ಪರಿಹರಿಸುವಂತೆ ಸರಕಾರವನ್ನು ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಒತ್ತಾಯಿಸಿದರು.