Sunday, March 23, 2025
Homeಮುಲ್ಕಿಡೆಂಗ್ಯೂ ಮಲೇರಿಯಾ ಮುಕ್ತ ಗ್ರಾಮ ಮಾಹಿತಿ ಕಾರ್ಯಕ್ರಮ

ಡೆಂಗ್ಯೂ ಮಲೇರಿಯಾ ಮುಕ್ತ ಗ್ರಾಮ ಮಾಹಿತಿ ಕಾರ್ಯಕ್ರಮ

ಜಿಲ್ಲಾ ಪ್ರಶಸ್ತಿ ವಿಜೇತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ* ಇದರ ನೇತೃತ್ವದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ,ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಕಿನ್ನಿಗೋಳಿ, ವಿನಾಯಕ ಮಹಿಳಾ ಮಂಡಳಿ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ನಮ್ಮ ಗ್ರಾಮ ಡೆಂಗ್ಯೂ ಮಲೇರಿಯಾ ಮುಕ್ತ ಗ್ರಾಮ ಎಂಬ ಶೀರ್ಷಿಕೆಯಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ಇವರ ಮಾರ್ಗದರ್ಶನದಲ್ಲಿ ಜುಲೈ 21 2024 ರಂದು ಮನೆ ಮನೆಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.

ಡಾಕ್ಟರ್ ಪ್ರದೀಪ್ ಆರೋಗ್ಯ ನಿರೀಕ್ಷಿಣಾಧಿಕಾರಿ ಮಂಗಳೂರುರವರು ಡೆಂಗ್ಯೂ, ಮಲೇರಿಯಾ ಹಾಗೂ ಚಿಕೂನ್ ಗುನ್ಯಾ ವೈರಸ್ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯಾ ಕೇಂದ್ರ ಕೆಮ್ರಾಲ್ ಸಿಬ್ಬಂದಿಯಾದ ಪೂರ್ಣಿಮಾ ಸಿಸ್ಟೆರ್, ಆಶಾ ಕಾರ್ಯಕರ್ತೆಯರು, ಮಂಡಳಿಯ ಗೌರವಾಧ್ಯಕ್ಷರು ಹಾಗೂ ರೋಟರಿ ಕ್ಲಬ್ ಕಿನ್ನಿಗೋಳಿ ಅಧ್ಯಕ್ಷರಾದ ಧನಂಜಯ್ ಪಿ ಶೆಟ್ಟಿಗಾರ್, ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಸರಸ್ವತಿ ದಾಸ್, ಮಂಡಳಿಯ ಉಪಾಧ್ಯಕ್ಷರಾದ ಪ್ರವೀಣ್, ಕಾರ್ಯದರ್ಶಿ ಮುರಳಿ ಹಾಗೂ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular