ದೇರಳಕಟ್ಟೆ: ಇಲ್ಲಿನ ರಸ್ತೆ ಬದಿಯಲ್ಲಿ ಸ್ವೀಟ್ ಕಾರ್ನರ್ ಒಂದರಲ್ಲಿ ಏಕಾಏಕಿ ಗ್ಯಾಸ್ ಸೋರಿಕೆಯಾಗಿ ಬೆಂಕಿಹೊತ್ತಿಕೊಂಡು ಸ್ಟಾಲ್ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಸ್ವೀಟ್ ಕಾರ್ನರ್ ಒಂದರಲ್ಲಿ ಗ್ಯಾಸ್ ಸಿಲಿಂಡರ್ ನಲ್ಲಿ ಸೋರಿಕೆ ಉಂಟಾಗಿತ್ತು. ಬಶೀರ್ ಎಂಬವರು ವ್ಯಾಪಾರದಲ್ಲಿ ತೊಡಗಿದ್ದ ವೇಳೆ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿದೆ. ಬಳಿಕ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಲ್ಲಿದ್ದ ಗ್ರಾಹಕರು ಹಾಗೂ ಸ್ಟಾಲ್ ಮಾಲಕ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಯ್ಗೆ, ನೀರು ಹಾಕಿ ಬೆಂಕಿ ನಂದಿಸಲು ಅಲ್ಲಿದ್ದವರು ಯತ್ನಿಸಿದ್ದರು. ಆದರೂ ಗ್ಯಾಸ್ ಸೋರಿಕೆ ನಿಲ್ಲಲಿಲ್ಲವಾದುದರಿಂದ ಸ್ಟಾಲ್ ಭಾಗಶಃ ಸುಟ್ಟು ಹೋಗಿದೆ.