ದಿನಾಂಕ12-12-2025 ರಂದು ಬೆಳಗಾವಿ ಸುರ‍್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ತಿನ ಕಲಾಪದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ ರವರು, ದಕ್ಷಿಣ ಕನ್ನಡ ಜಿಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸುತ್ತಿರುವ ಒಟ್ಟು ವಸತಿ ನಿಲಯಗಳ ಸಂಖ್ಯೆ ಎಷ್ಟು 2024-25 ರಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ ? ಎಂಬ ಪ್ರಶ್ನೆಗೆ ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಈ ರೀತಿ ಉತ್ತರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 21 ಮೆಟ್ರಿಕ್ ಪರ‍್ವ ಹಾಗೂ 61 ಮೆಟ್ರಿಕ್ ನಂತರದ ಹೀಗೆ ಒಟ್ಟು 82 ವಿದ್ಯರ‍್ಥಿನಿಲಯಗಳು ಕರ‍್ಯನಿರ್ವಹಿಸುತ್ತಿದ್ದು , ಕ್ರಮವಾಗಿ 1005 ಹಾಗೂ 7726 ಒಟ್ಟು 8731 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.


