Sunday, March 23, 2025
Homeಮಂಗಳೂರುದೇವಾಡಿಗ ಸಮಾಜ ಸೇವಾ ಸಂಘ (ರಿ.) ಪಾವಂಜೆ ಘಟಕದ ಅಧ್ಯಕ್ಷರಾಗಿ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಆಯ್ಕೆ

ದೇವಾಡಿಗ ಸಮಾಜ ಸೇವಾ ಸಂಘ (ರಿ.) ಪಾವಂಜೆ ಘಟಕದ ಅಧ್ಯಕ್ಷರಾಗಿ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಆಯ್ಕೆ

ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ (ರಿ.) ಪಾವಂಜೆ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ರಾಮದಾಸ ಪಾವಂಜೆ ಅಧ್ಯಕ್ಷತೆಯಲ್ಲಿ ಜು. 21ರಂದು ನಡೆಯಿತು. ಇಲ್ಲಿನ ವಿದ್ಯಾವಿನಾಯಕ ಯುವಕ ಮಂಡಲದ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ ಜರುಗಿತು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಗದೀಶ್‌ ಪಲಿಮಾರ್‌ ಸ್ವಾಗತಿಸಿ, ವಾರ್ಷಿಕ ವರದಿ ಓದಿದರು. ಕೋಶಾಧಿಕಾರಿ ಸತೀಶ್‌ ಎನ್.‌ ಇಂದಿರಾನಗರ ಆಯವ್ಯಯ ಮಂಡಿಸಿದರು. 2024-26ನೇ ಸಾಲಿಗೆ 2 ವರ್ಷಗಳ ಅವಧಿಗೆ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ, ಉಪಾಧ್ಯಕ್ಷರಾಗಿ ವಿಠಲ ದೇವಾಡಿಗ ಅರಂದು, ರಘು ಕೆ. ದೇವಾಡಿಗ ಹಳೆಯಂಗಡಿ, ಜಗದೀಶ ಪಲಿಮಾರು, ಸತೀಶ್‌ ಎನ್.‌ ಇಂದಿರಾನಗರ, ವಿಮಲಾ ಕೆ. ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ನಿಖಿಲ್‌ ದೇವಾಡಿಗ ಹಳೆಯಂಗಡಿ, ಕೋಶಾಧಿಕಾರಿ ಸುಭ್ರತ್‌ ದೇವಾಡಿಗ ಕದಿಕೆ, ಜೊತೆ ಕಾರ್ಯದರ್ಶಿ ಗಣೇಶ್‌ ದೇವಾಡಿಗ ತೋಕೂರು, ಸಂಘಟನಾ ಕಾರ್ಯದರ್ಶಿ ವಾಮನ ದೇವಾಡಿಗ ತೋಕೂರು, ಶೇಖರ ದೇವಾಡಿಗ ಬೀರ್ನಪಡ್ಪು, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಭಾಸ್ಕರ ದೇವಾಡಿಗ ಪಾವಂಜೆ ಮುಂತಾದವರು ಆಯ್ಕೆಯಾದರು.
ಹಲವರು ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು, ಗೌರವ ಸಲಹೆಗಾರರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

RELATED ARTICLES
- Advertisment -
Google search engine

Most Popular