ಮುಲ್ಕಿ: ಆಟೋರಿಕ್ಷಾ ಚಾಲಕ ಮಾಲಕರ ಸಂಘದ 2024 -25 ನೇ ಸಾಲಿನ ನೂತನ ಅಧ್ಯಕ್ಷರಾಗಿ ದೇವರಾಜ್ ಕೊಲಕಾಡಿ ಆಯ್ಕೆಯಾಗಿದ್ದಾರೆ.
ನೂತನ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾಗಿ ವಕೀಲರಾದ ಭಾಸ್ಕರ ಹೆಗ್ಡೆ, ಬಿಪಿನ್ ಪ್ರಸಾದ್, ಉಪಾಧ್ಯಕ್ಷರಾಗಿ ಸತೀಶ್ ಕೋಟ್ಯಾನ್ ಎಸ್ವಿಟಿ ಮಾನಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಗುಡ್ಡೆಯಂಗಡಿ ಪಂಜಿನಡ್ಕ, ಜೊತೆ ಕಾರ್ಯದರ್ಶಿಯಾಗಿ ವಿನಯ್ ಹೆಜಮಾಡಿ, ಕೋಶಾಧಿಕಾರಿಯಾಗಿ ಪ್ರವೀಣ್ ಕಾಮತ್ ಆಯ್ಕೆಯಾಗಿದ್ದಾರೆ.
ಉಳಿದಂತೆ ಸಮಿತಿಯ ಸದಸ್ಯರಾಗಿ ಅಣ್ಣು ಕೋಟ್ಯಾನ್, ಮೈಲೊಟ್ಟು, ಗೋಪಿನಾಥ ಸಾಲ್ಯಾನ್, ಗಿರೀಶ್ ಅಂಚನ್ ಶಿಮಂತೂರು, ಕಿಶೋರ್ ಪೂಜಾರಿ ಕವತ್ತಾರ್, ಮೋಹನ್ ದಾಸ್ ಎಸ್ ವಿ ಟಿ, ವಿಠಲ ಪೂಜಾರಿ ಕೊಕ್ರಾಣಿ, ಮನೋಜ್ ಧರ್ಮಸ್ಥಾನ, ರೋಹಿತ್ ಮಾನಂಪಾಡಿ, ನಾಗರಾಜ್ ಕವತ್ತಾರು, ಚಂದ್ರಹಾಸ ಕುಕ್ಯಾನ್, ಪ್ರಶಾಂತ್ ನೆಲಗುಡ್ಡೆ, ಶ್ರೀನಿವಾಸ್ ಕೋಟ್ಯಾನ್, ಶಿವ ಕೊಳಚಿಕಂಬಳ, ಪ್ರಭಾಕರ್ ಶೆಟ್ಟಿ ಕಾರ್ನಾಡ್, ಆನಂದ ಅಂಗಾರಗುಡ್ಡೆ, ಪ್ಯಾಟ್ರಿಕ್ ಡಿಸೋಜಾ ಕವತ್ತಾರ್ ಆಯ್ಕೆಯಾಗಿದ್ದಾರೆ.
ನೂತನ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ದೇವರಾಜ್ ಕೊಲಕಾಡಿ ರವರನ್ನು ಬೆಂಗಳೂರಿನ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್ ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಗುರುಪ್ರಸಾದ್ ಭಟ್ ಮುಂಡ್ಕೂರು ಪುನೀತ್ ಕೃಷ್ಣ, ಪತ್ರಕರ್ತ ಹರೀಶ್ ಹೆಜ್ಮಾಡಿ ಮತ್ತಿತರರು ಅಭಿನಂದಿಸಿದ್ದಾರೆ.