Thursday, December 5, 2024
Homeಕಾಸರಗೋಡುಜ್ಞಾನದಿಂದ ಅಭಿವೃದ್ಧಿಯಾಗುವುದು ಕೂಡಾ ನಮ್ಮ ಜೀವನದಲ್ಲಿ ಬೆಳಕು ಮೂಡಿದಂತೆ: ಪ್ರೊ ಮುಬೀನಾ ಪರ್ವಿನ್ ತಾಜ್

ಜ್ಞಾನದಿಂದ ಅಭಿವೃದ್ಧಿಯಾಗುವುದು ಕೂಡಾ ನಮ್ಮ ಜೀವನದಲ್ಲಿ ಬೆಳಕು ಮೂಡಿದಂತೆ: ಪ್ರೊ ಮುಬೀನಾ ಪರ್ವಿನ್ ತಾಜ್

ಮಂಜೇಶ್ವರ: ದಿನಾಂಕ 1.11.2024ರಂದು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಪಾವೂರು ಮಂಜೇಶ್ವರ ಇದರ ವತಿಯಿಂದ ನಡೆದ ದೀಪಾವಳಿ ಹಬ್ಬದ ಆಚರಣೆ ಮತ್ತು ಜಾದೂ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇನೋಳಿ ಬ್ಯಾರೀಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಪ್ರೊಫೆಸರ್ ಮುಬೀನಾ ಪರ್ವಿನ್ ತಾಜ್ ಮಾತನಾಡಿ “ಪ್ರತಿಯೊಬ್ಬ ಮನುಷ್ಯ ಕೂಡಾ ತನ್ನ ಪ್ರತಿಭೆ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡು, ಅಪಾರ ಜ್ಞಾನ ಸಂಪಾದಿಸಿದಾಗ ಕತ್ತಲೆಯ ಲೋಕದಿಂದ ಬೆಳಕಿನ ಹಾದಿ ಹಿಡಿಯುತ್ತಾನೆ ಇದುವೇ ದೀಪಾವಳಿಯೆಂದರು”.
ಸಮಾರಂಭವನ್ನು ಕಲಾ ಸೃಷ್ಠಿ ಸಂಸ್ಥೆ ಸದಸ್ಯರು ಮೇಣದ ಬತ್ತಿ ಬೆಳಗಿ ನಂತರ ಹೂಗುಚ್ಛವಾಗಿ ಪರಿವರ್ತಿಸುವ ಜಾದೂ ಮೂಲಕ ವಿಭಿನ್ನ ರೀತಿಯಲ್ಲಿ ಉದ್ಘಾಟಿಸಿ ಪ್ರೇಕ್ಷಕರ ಮನಗೆದ್ದರು.
ಫಾದರ್ ಸಿರಿಲ್ ಡಿಸೋಜ ಮಾತನಾಡಿ “ದೀಪಾವಳಿಯನ್ನು 7500ವರ್ಷಗಳ ಹಿಂದೆಯೇ ಸುಖಿ ಹಬ್ಬ ಅಂತ ಆಚರಿಸುತ್ತಿದ್ದರು. ಶ್ರೀರಾಮ ಅಯೋಧ್ಯೆಗೆ ವನವಾಸದಿಂದ ಹಿಂದಿರುಗಿ ಬರುವಾಗ ಅಯೋಧ್ಯೆ ಜನರು ಹಣತೆಯ ಬೆಳಗಿ ಸಂಭ್ರಮ ಪಟ್ಟ ಉಲ್ಲೇಖವಿದೆಯೆಂದರು”.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ದಿನೇಶ್ ಕೊಡಂಗೆ ಮಾತನಾಡಿ ದೀಪಗಳು ನಮ್ಮ ಜೀವನದ ಅವಿಭಾಜ್ಯ ಅಂಗ… ಜೀವನದಲ್ಲಿ ಕಷ್ಟ ಸುಖಗಳು ಹೇಗೋ ಹಾಗೆಯೇ ಕತ್ತಲು ಬೆಳಕಿಗೂ ಮಹತ್ವವಿದೆಯೆಂದರು
ಇದೇ ಸಂದರ್ಭದಲ್ಲಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮಂಜೇಶ್ವರ ಇದರ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತಾ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ನಂತರ ಕಲಾ ಸೃಷ್ಟಿ ತಂಡದ ನಿರ್ದೇಶಕರಾದ ಕು.ಶಮಾ ಪರ್ವಿನ್ ತಾಜ್ ಮತ್ತು ತಂಡದವರಿಂದ ವೈವಿಧ್ಯಮಯ ಜಾದೂ ಪ್ರದರ್ಶನ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸ್ನೇಹಾಲಯ ಸಂಸ್ಥೆಯ ಸರಿತಾ ಕ್ರಾಸ್ತ ಸ್ವಾಗತಿಸಿ,ಕು. ಲವೀಟಾ ಡಿಸೋಜ ನಿರೂಪಣೆಗೈದರು.

RELATED ARTICLES
- Advertisment -
Google search engine

Most Popular