ಬಂಟ್ವಾಳ: ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ದೇವಿಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ.ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಆಯ್ಕೆ ಮಾಡಿದರು. ದೇವಿಪ್ರಸಾದ್ ಶೆಟ್ಟಿ ಕಳೆದ 10 ವರ್ಷದಿಂದ ವಾಮದಪದವು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ವಾಮದಪದವು ಘಟಕದ ವತಿಯಿಂದ ಜನಪರ ಯೋಜನೆಗಳನ್ನು ಹಮ್ಮಿಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮುಖಾಂತರ ಸದ್ದು ಮಾಡಿದ್ದರು. ಬಡ್ಡಿ ಮಾಫಿಯಾ ವಿರುದ್ಧ ಜನಜಾಗೃತಿ ಸಭೆ, ಆರೋಗ್ಯ ತಪಾಸಣೆ ಶಿಬಿರ, ಕೋರಾನದ ಸಂಧರ್ಭದಲ್ಲಿ 1980 ಮನೆಗೆ ಕಿಟ್, ಅನಾರೋಗ್ಯ ಪೀಡಿತ ರೋಗಿಗಳಿಗೆ ಸಂಘಟನೆಯ ಮುಖಾಂತರ ಧನ ಸಹಾಯ ಹಾಗೂ ಅನೇಕ ಜನ ಪರ ಹೋರಾಟದ ಮುಖಾಂತರ ಈಗ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.