ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಋಕ್ ಸಂಹಿತಾ ಯಾಗ ಹಾಗೂ ಶ್ರೀಮದ್ಭಾಗವತ ಸಪ್ತಾಹ ಮಹೋತ್ಸವದಲ್ಲಿ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಮಠಾಧೀಶರಾದ ಪರಮಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ಭಾಗವಹಿಸಿದರು.

ಉಡುಪಿಯ ನಿಕಟಪೂರ್ವ ಶಾಸಕರು, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೆ. ರಘುಪತಿ ಭಟ್, ಶಿಲ್ಪಾ ಆರ್. ಭಟ್ ದಂಪತಿಗಳು ಪಾದ ಪೂಜೆ ನೆರವೇರಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಗುರಿಕಾರರು ಉಪಸ್ಥಿತರಿದ್ದು, ಶ್ರೀಪಾದರನ್ನ ಗೌರವಯುತವಾಗಿ ಬರಮಾಡಿಕೊಂಡರು.
ವರದಿ : ವಿನೋದ್ ಶೆಟ್ಟಿ ಉಡುಪಿ

