ಧರ್ಮಸ್ಥಳ:ನಿವೃತ್ತ ಯೋಧ ಮರಳಿ ಮನೆಗೆ

0
51

ಉಜಿರೆ: ಭಾರತೀಯ ಭೂಸೇನೆಯಲ್ಲಿ ಇಪ್ಪತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಮೂಲತ: ಧರ್ಮಸ್ಥಳದ ನಿವಾಸಿ ಅನೀಶ್ ಡಿ.ಎಲ್. ಇಂದು (ಜೂ.3) ಮರಳಿ ಮನೆಗೆ ಬರಲಿದ್ದಾರೆ.

ಸೋಮವಾರ ಅಪರಾಹ್ನ 2:30 ಕ್ಕೆ ಅವರನ್ನು ಬೆಳ್ತಂಗಡಿಯಲ್ಲಿ ಸ್ವಾಗತಿಸಿ ಅಲ್ಲಿಂದ ಧರ್ಮಸ್ಥಳದಲ್ಲಿರುವ ಅವರ ಮನೆ ವರೆಗೆ ವಾಹನ ಜಾಥಾದಲ್ಲಿ ಕರೆತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಡಿ. ಲಾಲಿ ಮತ್ತು ಸಾರಮ್ಮ ದಂಪತಿಯ ಮಗನಾದ ಅನೀಶ್ ಡಿ.ಎಲ್. ಕಳೆದ 20 ವರ್ಷಗಳಲ್ಲಿ ರಾಜಸ್ತಾನ, ಮಣಿಪುರ, ಉತ್ತರಪ್ರದೇಶ, ಕರ್ನಾಟಕ ಮತ್ತು ಉತ್ತರಾಖಂಡ ಸೇರಿದಂತೆ ಹಲವು ಕಡೆ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here