ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದ “ಧರ್ಮದೈವ”ಸಿನಿಮಾ ತಂಡದಿಂದ, ಇನ್ನೊಂದು ಬಹುನಿರೀಕ್ಷೆಯ ಕನ್ನಡ ತುಳು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಡಾ.ಎಂ.ಮೋಹನ ಆಳ್ವ ಮೂಡುಬಿದಿರೆ ಅರ್ಪಿಸುವ, ಕೃಷ್ಣವಾಣಿ ಪಿಕ್ಚರ್ಸ್ ನವರ ಬಹು ನಿರೀಕ್ಷೆಯ ಕನ್ನಡ-ತುಳು ಸಿನಿಮಾ, ಧರ್ಮಚಾವಡಿ ಬಹುತೇಕ ತನ್ನ ಚಿತ್ರೀಕರಣವನ್ನು ಮುಗಿಸಿದ್ದು, ಇತ್ತೀಚೆಗೆ ನಡುಬೈಲು ಗುತ್ತುಮನೆಯಲ್ಲಿ ಖ್ಯಾತ ಚಿತ್ರ ನಿರ್ಮಾಪಕ ನಿರ್ದೇಶಕ ಶಿವದೂತ ಗುಳಿಗೆ ಖ್ಯಾತಿಯ ವಿಜಯ ಕುಮಾರ್ ಕೊಡಿಯಾಲ್ ಬೈಲ್ ದೀಪ ಬೆಳಗಿಸಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಬೂಡಿಯಾರ್ ರಾಧಾಕೃಷ್ಣ ರೈ,ಪ್ರಗತಿ ಸ್ಟಡಿ ಸೆಂಟರ್ ಸಂಚಾಲಕರು ಗೋಕುಲ್ ನಾಥ್ ಪಿವಿ.,ಅಕ್ಷಯ ಕಾಲೇಜಿನ ಅಧ್ಯಕ್ಷರು ಜಯಂತ ನಡುಬೈಲು, ಪುತ್ತೂರು ನಗರ ಸಭೆಯ ಮಾಜಿ ಅಧ್ಯಕ್ಷ ಮಹಮ್ಮದಾಲಿ ಸಂಪ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನಿತಿನ್ ರೈ ಕುಕ್ಕುವಳ್ಳಿ,ನುಳಿಯಾಲು ಕಥೆ ಬರೆದು ನಿರ್ದೇಶಿಸಿರುವ “ಧರ್ಮ ಚಾವಡಿ” ಕನ್ನಡ ತುಳು ಸಿನಿಮಾದ ನಿರ್ಮಾಪಕರು:ನಡುಬೈಲು ಜಗದೀಶ್ ಅಮೀನ್, ಸಹ ನಿರ್ಮಾಣ: ಸರಿತಾ ಜಗದೀಶ್ ಅಮೀನ್.ಚಿತ್ರಕಥೆ, ಸಂಭಾಷಣೆ :ರಝಾಕ್ ಪುತ್ತೂರು ಬರೆದಿದ್ದು, ಜಾನಪದ ವಿದ್ವಾಂಸ:ಕೆ.ಕೆ.ಪೇಜಾವರ ಅವರ ಸಾಹಿತ್ಯ ಚಿತ್ರಕ್ಕಿದೆ ಕ್ಯಾಮರಾ:ಅರುಣ್ ರೈ ಪುತ್ತೂರು, ಶ್ರೀನಾಥ್ ಪವಾರ್ ಸಂಕಲನ: ಲೊಯ್ ವಳಂಟೈನ್ ಸಲ್ದಾಣ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ರಮೇಶ್ ರೈ ಕುಕ್ಕುವಳ್ಳಿ,ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ,ಪ್ರಕಾಶ್ ಧರ್ಮ ನಗರ, ರಕ್ಷನ್ ಮಾಡೂರು
ರವಿ ಸ್ನೇಹಿತ್ ,ದಯಾನಂದ ರೈ ಬೆಟ್ಟಂಪಾಡಿ, ಬಾಬಾ ಪ್ರಸಾದ್ ಅರಸ ಮುಖ್ಯ ಭೂಮಿಕೆಯಲ್ಲಿರುವ, ಧರ್ಮಚಾವಡಿ ಚಿತ್ರದಲ್ಲಿ ಅವರ ಜೊತೆ ಹೊಸ ಕಲಾವಿದರ ದಂಡೇ ಇದ್ದು,ಅತೀ ಶೀಘ್ರದಲ್ಲೇ,ಅನೇಕ ತಂತ್ರಜ್ಞರ ಕೈಚಳಕದೊಂದಿಗೆ ಮೂಡಿಬರಲಿದೆ.
-ನಾರಾಯಣ ರೈ ಕುಕ್ಕುವಳ್ಳಿ.