Sunday, July 21, 2024
Homeಬೆಳ್ತಂಗಡಿಧರ್ಮಸ್ಥಳ: ಜೀವಂತ ವ್ಯಕ್ತಿಯನ್ನು ʻಮೃತಪಟ್ಟಿದ್ದಾರೆʼ ಎಂದು ತಪ್ಪು ಮಾಹಿತಿ ನೀಡಿದ ಪೊಲೀಸರು!

ಧರ್ಮಸ್ಥಳ: ಜೀವಂತ ವ್ಯಕ್ತಿಯನ್ನು ʻಮೃತಪಟ್ಟಿದ್ದಾರೆʼ ಎಂದು ತಪ್ಪು ಮಾಹಿತಿ ನೀಡಿದ ಪೊಲೀಸರು!

ಮಂಗಳೂರು: ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಪೊಲೀಸರು ರೋಗಿಯ ಕುಟುಂಬಸ್ಥರಿಗೆ ತಪ್ಪು ಮಾಹಿತಿ ನೀಡಿದ ಘಟನೆ ಬೆಳ್ತಂಗಡಿಯ ಧರ್ಮಸ್ಥಳ ಠಾಣೆಯಲ್ಲಿ ನಡೆದಿದೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯ ಶೇಖರ ಗೌಡ (55) ಜೂ. 15ರಂದು ತೀವ್ರ ಅಸ್ವಸ್ಥಗೊಂಡು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅವರ ಜೊತೆ ಸಂಬಂಧಿಕರಾರೂ ಇರಲಿಲ್ಲ. ಹೀಗಾಗಿ ತಮ್ಮ ಠಾಣೆಗೆ ಬಂದ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡು, ಠಾಣಾ ಸಿಬ್ಬಂದಿ ಶೇಖರ ಗೌಡರ ಮನೆಗೆ ಅವರು ಮೃತಪಟ್ಟಿರುವುದಾಗಿ ಫೋನ್‌ ಮಾಡಿದ್ದರು. ಆದರೆ ಸಂಬಂಧಿಕರು ಮತ್ತು ಧರ್ಮಸ್ಥಳ ಪೊಲೀಸರು ವೆನ್ಲಾಕ್‌ ಆಸ್ಪತ್ರೆಗೆ ಹೋಗಿ ನೋಡಿದಾಗ ಶೇಖರ ಗೌಡ ಜೀವಂತವಾಗಿದ್ದರು.
ಶೇಖರ ಗೌಡ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ವೆನ್ಲಾಕ್‌ ಆಸ್ಪತ್ರೆಯವರು ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದ್ದರು. ಪಾಂಡೇಶ್ವರ ಪೊಲೀಸರು ಇಮೇಲ್‌ ಮೂಲಕ ಬೆಳ್ತಂಗಡಿ ಠಾಣೆಗೆ ಮಾಹಿತಿ ನೀಡಿದ್ದರು. ಅಲ್ಲಿಂದ ಧರ್ಮಸ್ಥಳ ಠಾಣೆಗೆ ವರದಿ ಹೋಗಿತ್ತು.
ವರದಿಯಲ್ಲಿ ಗಂಭೀರ ಸ್ಥಿತಿ ಎಂದು ಉಲ್ಲೇಖಿಸಲಾಗಿತ್ತು. ಆದರೆ ಸಬ್ಜೆಕ್ಟ್‌ ಬರೆಯುವಲ್ಲಿ ಮೃತಪಟ್ಟಿದ್ದಾರೆ ಎಂಬುದಾಗಿ ಟೈಪ್‌ ಮಾಡಲಾಗಿತ್ತು. ಇಮೇಲ್‌ ಓದಿದ ಧರ್ಮಸ್ಥಳ ಠಾಣೆಯ ಪೊಲೀಸರು ಸಬ್ಜೆಕ್ಟ್ ನಲ್ಲಿ ಬರೆದಿದ್ದ ವಿಷಯವನ್ನೇ ತಪ್ಪಾಗಿ ಭಾವಿಸಿ ಶೇಖರ್‌ ಗೌಡರ ಮನೆಗೆ ಅವರು ಮೃತಪಟ್ಟಿದ್ದಾರೆ ಎಂದೇ ಮಾಹಿತಿ ನೀಡಿದ್ದರು. ವರದಿಯಲ್ಲಿ ಸರಿಯಾಗಿ ಬರೆದಿದ್ದರೂ ಇಮೇಲ್‌ನ ಸಬ್ಜೆಕ್ಟ್‌ ಕಾಲಂನಲ್ಲಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿದುದೇ ಯಡವಟ್ಟಿಗೆ ಕಾರಣವಾಯಿತು ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular