Wednesday, October 9, 2024
Homeರಾಜ್ಯಧರ್ಮಸ್ಥಳ; ಯುವ ಚೌಪಾಲ್ ಕಾರ್ಯಕ್ರಮ

ಧರ್ಮಸ್ಥಳ; ಯುವ ಚೌಪಾಲ್ ಕಾರ್ಯಕ್ರಮ

ಧರ್ಮಸ್ಥಳ ಮಹಾಶಕ್ತಿ ಕೇಂದ್ರ ದ ಬೆಳಾಲು ಗ್ರಾಮದ ಯುವ ಚೌಪಾಲ್ ಕಾರ್ಯಕ್ರಮ ದೊಂಪದಪಲ್ಕೆ ಡಿಪಿ ಸ್ಪೋರ್ಟ್ಸ್ ಕ್ಲಬ್ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯುವಮೋರ್ಚಾ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಕಡಮ್ಮಾಜೆ ಸವಿವರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಂಡಲ ಯುವಮೋರ್ಚಾ ಮಾಜಿ ಅಧ್ಯಕ್ಷರಾದ ಯಶವoತ್ ಗೌಡ ಬೆಳಾಲು, ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಉದಯ ಕುರುಡಂಗೆ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ ಬಿ. ಕೆ ಬಂದಾರು ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular