Monday, July 15, 2024
Homeಅಪರಾಧನೂಡಲ್ಸ್ ಪ್ಯಾಕ್ ನೊಳಗೆ ಕೋಟ್ಯಂತರ ರೂ ಮೌಲ್ಯದ ವಜ್ರ, ಚಿನ್ನ ಸಾಗಾಟ

ನೂಡಲ್ಸ್ ಪ್ಯಾಕ್ ನೊಳಗೆ ಕೋಟ್ಯಂತರ ರೂ ಮೌಲ್ಯದ ವಜ್ರ, ಚಿನ್ನ ಸಾಗಾಟ

ಮುಂಬೈ: ಪ್ರಯಾಣಿಕರ ದೇಹದ ಭಾಗಗಳಲ್ಲಿ ಮತ್ತು ನೂಡಲ್ಸ್ ಪ್ಯಾಕ್ ನೊಳಗೆ ವಜ್ರ ಮತ್ತು ಚಿನ್ನ ಕಳ್ಳಸಾಗಣೆ ಜಾಲವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಲಾಗಿದೆ. 6.46 ಕೋಟಿ ರೂ ಮೌಲ್ಯದ ಚಿನ್ನ ಮತ್ತು ವಜ್ರಗಳನ್ನು ಸಾಗಿಸುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. 4.44 ಕೋಟಿ ರೂ ಮೌಲ್ಯದ ಚಿನ್ನ ಮತ್ತು 2 ಕೋಟಿ ರೂ ಮೌಲ್ಯದ ವಜ್ರಗಳನ್ನು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಮುಂಬೈನಿಂದ ಬ್ಯಾಂಕಾಕ್ ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ತಪಾಸಣೆ ನಡೆಸಿದಾಗ ನೂಡಲ್ಸ್ ಪ್ಯಾಕೇಟ್ ಗಳಲ್ಲಿ ವಜ್ರಗಳನ್ನು ಅಡಗಿಸಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಆ ನಂತರ ಅದೇ ರೀತಿ ಚಿನ್ನ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ.

RELATED ARTICLES
- Advertisment -
Google search engine

Most Popular