Monday, February 10, 2025
Homeಮಂಗಳೂರುಹಕ್ಕುಪತ್ರ ವಿತರಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ, ಅಭಯರು-ನನ್ನ ನಡುವೆ ಹುಳಿ ಹಿಂಡುವ ಶಾಸಕರ ಪ್ರಯತ್ನ ಫಲಿಸಲ್ಲ: ಮಿಥುನ್...

ಹಕ್ಕುಪತ್ರ ವಿತರಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ, ಅಭಯರು-ನನ್ನ ನಡುವೆ ಹುಳಿ ಹಿಂಡುವ ಶಾಸಕರ ಪ್ರಯತ್ನ ಫಲಿಸಲ್ಲ: ಮಿಥುನ್ ರೈ

ಹಕ್ಕುಪತ್ರ ವಿತರಣೆಯ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ,94 ಸಿ, 94 ಸಿ.ಸಿ.ಯೋಜನೆಯ ಹಕ್ಕುಪತ್ರ ಕೊಡುವುದು ಸಿದ್ಧರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ,ಅದನ್ನು ಪ್ರತೀ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರೇ ನೀಡುವ ಸಂಪ್ರದಾಯವಿದೆ, ಈ ಹಿಂದಿನ ಸರಕಾರದಲ್ಲೂ ಉಸ್ತುವಾರಿ ಸಚಿವರಾಗಿದ್ದ ಸಿ.ಟಿ.ರವಿಯವರು ಇದೇ ಮೂಡುಬಿದಿರೆ ಸಮಾಜಮಂದಿರಕ್ಕೆ ಬಂದು ಹಕ್ಕುಪತ್ರ ವಿತರಿಸಿದ್ದರು,ಆಗ ಶಾಸಕರಾಗಿದ್ದವರು ಅಭಯಚಂದ್ರರು ಎನ್ನುವುದನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ನೆನಪಿಸಿಕೊಳ್ಳಲಿ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಸರಕಾರದ ಯೋಜನೆಯಾಗಿರುವ 94 ಸಿ.ಹಾಗೂ 94 ಸಿ.ಸಿ.ಯೋಜನೆಯಲ್ಲಿ ಮೂಲ್ಕಿ ಮೂಡುಬಿದಿರೆಯಲ್ಲಿ ಅಭಯಚಂದ್ರ ಅವರ ಅವಧಿಯಲ್ಲಿ ಸುಮಾರು ಹದಿನೈದು ಸಾವಿರ ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ,ಸರಕಾರದ ಈಗಿನ ಪಂಚಗ್ಯಾರಂಟಿ ಯೋಜನೆಗಳಲ್ಲೂ ಪಕ್ಷ ಬೇಧ ಮಾಡದೆ ಅರ್ಹರೆಲ್ಲರಿಗೂ ನೀಡಲಾಗುತ್ತಿದೆ,ಇದರಲ್ಲಿ ಯಾರೂ ಮೂಗುತೂರಿಸಿಲ್ಲವೆಂದರು.
ಹದಿನೇಳನೇ ತಾರೀಕಿನಂದು ಸಂಜೆ ಮೂರು ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮೂಡುಬಿದಿರೆಯಲ್ಲಿ ಸುಮಾರು 300 ಮಂದಿಗೆ ಹಕ್ಕುಪತ್ರ ವಿತರಿಸಲಿದ್ದಾರೆ, ಶಾಸಕರು ಆ ದಿನ ಇಲ್ಲದಿದ್ದಲ್ಲಿ ನಾವೇನು ಮಾಡಲಿ, ಶಾಸಕರತ್ರ ಕೇಳಿ ಬರಲು ಇದು ಶಾಸಕರ ಮನೆಯ ಕಾರ್ಯಕ್ರಮವಲ್ಲ,ಸರಕಾರಿ ಕಾರ್ಯಕ್ರಮ ಎಂದವರು ಹೇಳಿದರು.
ಹಕ್ಕುಪತ್ರ ವಿತರಣೆಯಲ್ಲಿ ತಾರತಮ್ಯ ಮಾಡಿರುವುದು ಶಾಸಕರೇ ಹೊರತು ನಾವಲ್ಲ,ಹಿಂದೆ ವಾಲ್ಪಾಡಿ ಸಹಿತ ಹಲವೆಡೆ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿಯ ಜನರಿರುವ ಕಡೆಗಳಲ್ಲಿ ಕಡೆಗಣಿಸಿರುವುದು ನಮಗೆ ತಿಳಿದಿದೆ ಎಂದ ಅವರು ‘ ನಾನು ಅಸಹಾಯಕ’ ಎನ್ನುವರ್ಥದಲ್ಲಿ ಹೇಳಿಕೆ ನೀಡಿರುವ ಶಾಸಕರ ಹೇಳಿಕೆ ನಮಗೂ ಬೇಸರ ತಂದಿದೆ ಎಂದರು.
ಶಾಸಕರು ನಿಜವಾಗಿಯೂ ಅವರ ಸರಕಾರದ ಅವಧಿಯಲ್ಲೇ ಅಸಹಾಯಕರಾಗಿದ್ದರು, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದ ಅವರು ಅಸಹಾಯಕರಾಗಿದ್ದರೇ ವಿನಹ ನಮ್ಮ ಸರಕಾರ ಬಂದ ನಂತರವಲ್ಲ ಎಂದರು.
ಮಾಜಿ ಸಚಿವರಾದ ಕೆ.ಅಭಯಚಂದ್ರ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ,ಸುರೇಶ್ ಪ್ರಭು,ಜೊಸ್ಸಿ ಮಿನೇಜಸ್, ಇಕ್ಬಾಲ್ ಕರೀಮ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular