Wednesday, September 11, 2024
Homeಬೆಂಗಳೂರುಡಿಜಿಟಲ್‌ ಮಾಧ್ಯಮದಲ್ಲೂ ಇನ್ನು ಸರಕಾರದ ಜಾಹೀರಾತು: ಅರ್ಹತೆಗಳೇನು?

ಡಿಜಿಟಲ್‌ ಮಾಧ್ಯಮದಲ್ಲೂ ಇನ್ನು ಸರಕಾರದ ಜಾಹೀರಾತು: ಅರ್ಹತೆಗಳೇನು?

ಬೆಂಗಳೂರು: ಡಿಜಿಟಲ್‌ ಮಾಧ್ಯಮ ಕೂಡ ಹೆಚ್ಚು ಜನರನ್ನು ತಲುಪಬಲ್ಲ ಪ್ರಭಾವಶಾಲಿ ಮಾಧ್ಯಮ ಎಂಬುದು ಸರಕಾರದ ಅರಿವಿಗೆ ಬಂದಿದೆ. ಹೀಗಾಗಿ ಇನ್ನು ಮುಂದೆ ಡಿಜಿಟಲ್‌ ಮಾಧ್ಯಮದಲ್ಲೂ ಜಾಹೀರಾತು ನೀಡಲು ಸರಕಾರ ನಿರ್ಧರಿಸಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗೆ ಹೋಲಿಸಿದರೆ ಡಿಜಿಟಲ್‌ ಜಾಹೀರಾತುಗಳು ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ 2024 ಹೆಚ್ಚಿನ ಆದ್ಯತೆ ನೀಡಲು ಸರಕಾರ ನಿರ್ಧಾರ ಮಾಡಿದೆ.
ಡಿಜಿಟಲ್‌ ಜಾಹೀರಾತುಗಳಿಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಲು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಡಿಜಿಟಲ್‌ ಇನ್ಫ್ಲುಯೆನ್ಸರ್‌ಗಳ ಆಯ್ಕೆಗೆ ಮಾನದಂಡ ನಿಗದಿ ಮಾಡಿದ್ದು, ಡಿಜಿಟಲ್‌ ಜಾಹೀರಾತು ಏಜೆನ್ಸಿಗಳಿಗೂ ಮಾನದಂಡ ಹೇರಲಾಗಿದೆ.
ಅರ್ಹ ಡಿಜಿಟಲ್‌ ಮಾಧ್ಯಮ ಘಟಕಗಳು
ವಿಡಿಯೊ ಸ್ಕ್ರೀಮಿಂಗ್‌ ಫ್ಲಾಟ್‌ಫಾರಂಗಳು: ಗೂಗಲ್‌ (ಯೂಟ್ಯೂಬ್)‌, ಮೆಟಾ (ಫೇಸ್‌ಬುಕ್)‌, ಇನ್ಸ್‌ಟಾಗ್ರಾಂ, ವಾಟ್ಸಾಪ್‌ ಬಿಸಿನೆಸ್‌ ಇತರ
ಸರ್ಚ್‌ ಇಂಜಿನ್‌ಗಳು: ಗೂಗಲ್‌, ಬಿಂಗ್‌ ಮತ್ತು ಇತರ
ಸಾಮಾಜಿಕ ಜಾಲತಾಣಗಳ: ಎಕ್ಸ್‌ (ಟ್ವಿಟರ್‌), ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ವಾಟ್ಸಾಪ್‌, ಟೆಲಿಗ್ರಾಂ, ಲಿಂಕ್‌ಡಿನ್‌ ಇತ್ಯಾದಿ
ಒಟಿಟಿ ಫ್ಲಾಟ್‌ಫಾರಂ: ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಸನ್‌ನೆಕ್ಸ್ಟ್‌, ಇತರ
ಫಿನ್‌ಟೆಕ್‌ ಫ್ಲಾಟ್‌ಫಾರಂ: ಪೇಟಿಎಂ, ಫೋನ್‌ಪೇ ಮತ್ತು ಗೂಗಲ್‌ ಪೇ ಇತರ
ಡಿಜಿಟನ್‌ ಜಾಹೀರಾತು ಏಜೆನ್ಸಿಗೆ ಅರ್ಹತೆ
ಡಿಜಿಟಲ್‌ ಜಾಹೀರಾತಿಗಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಸಹಯೋಗ ಹೊಂದಲು ಏಜೆನ್ಸಿಯ ಈ ಕೆಳಗಿನ ಮಾನದಂಡಗಳನ್ನು ಪೂರೈಸಿರಬೇಕು
ಭಾರತ ಸರ್ಕಾರದ ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ನಲ್ಲಿ ನೋಂದಣಿಯಾದ ಕಾನೂನುಬದ್ಧ ಸಂಘಟಿತ ಘಟಕವಾಗಿರಬೇಕು. ಪ್ರೈವೆಟ್‌ ಲಿಮಿಟೆಡ್‌ ಕಂಪನಿ, ಪಬ್ಲಿಕ್‌ ಲಿಮಿಟೆಡ್‌ ಕಂಪನಿ, ಲಿಮಿಟೆಡ್‌ ಲಯಬಿಲಿಟಿ ಪಾಲುದಾರಿಕೆ
ಎಂಪ್ಯಾನೆಲಿಂಗ್‌ ಸಮಯದಲ್ಲಿ ಕನಿಷ್ಟ ಎರಡು ವರ್ಷವಾಗಿರಬೇಕು
ಮಾನ್ಯವಾದ ಜಿಎಸ್‌ಟಿ ನೋಂದಣಿ ಇರಬೇಕು
ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಕಚೇರಿ ಇರಬೇಕು
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಾಮುಖ್ಯತೆ ಇರಬೇಕು

RELATED ARTICLES
- Advertisment -
Google search engine

Most Popular