ದಿನಾಂಕಃ 14/03/2025 ರಂದು ವಿಧಾನ ಪರಿಷತ್ತಿನ ಕಲಾಪದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿಸೋಜಾ ರವರು ಕೊಂಕಣಿ ಸಾಹಿತ್ಯ ಅಕಾಡೆಮಿಯ ಕಟ್ಟಡದ ಬಗ್ಗೆ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ರವರೊಂದಿಗೆ ಸದನ ದ ಪ್ರಶ್ನೋತ್ತರ ಸಮಯದಲ್ಲಿ ಚರ್ಚಿಸಿದರು.
ಕೊಂಕಣಿ ಸಾಹಿತ್ಯ ಅಕಾಡೆಮಿಯ ಕಟ್ಟಡವು ಸಂಪೂರ್ಣಗೊಳ್ಳದೇ ಕೊಂಕಣಿ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಹಾಗೂ ಯಾವಾಗ ಪೂರ್ಣಗೊಳ್ಳುವುದು; ಈ ಕಟ್ಟಡಕ್ಕೆ ಸರ್ಕಾರದ ಅನುದಾನ ಒದಗಿಸಲು ಕೊಂಡಿರುವ ಕ್ರಮವೇನು ಎಂಬ ಐವನ್ ಡಿʼಸೋಜಾರವರ ಪ್ರಶ್ನೆಗೆ ಸರ್ಕಾರದ ಆದೇಶ ಸಂಖ್ಯೆ: ಕಸಂವಾ 47 ಕೆಒಎಲ್ ಅಕ 2021 ದಿನಾಂಕ:02-12-2021ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಕಟ್ಟಡ ಕಾಮಗಾರಿಗೆ ರೂ.300-00ಲಕ್ಷಗಳ ಅಂದಾಜುಪಟ್ಟಿಗೆ ಸೀಮಿತಗೊಳಿಸಿ ಅಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ದಿನಾಂಕ: 09-01-2022ರಂದು 300.00 ಲಕ್ಷಗಳನ್ನು ಜಿಲ್ಲಧಿಕಾರಿ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಬಿಡುಗಡೆ ಮಾಡಲಾಗಿರುತ್ತದೆ.
ಕೊಂಕಣಿ ಅಕಾಡೆಮಿಯ ಕಟ್ಟಡ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗ ಇವರು ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಒಟ್ಟು ರೂ.269.54 ಲಕ್ಷಗಳನ್ನು ವೆಚ್ಚ ಮಾಡಲಾಗಿದ್ದು ಯಾವುದೇ ಅನುದಾನದ ಕೊರತೆ ಇರುವುದಿಲ್ಲ ದ.ಕ. ಜಿಲ್ಲೆಯಲ್ಲಿ ಖಾಸಗಿ ಅನುದಾನರಹಿತ ಪ್ರಾಥಮಿಕ/ ಪ್ರೌಢ ಶಾಲೆಗಳಲ್ಲಿ 6ರಿಂದ 10ನೇ ತರಗತಿಯವರೆಗೆ 89 ವಿದ್ಯಾರ್ಥಿಗಳು ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಕಲಿಯುತ್ತಿದ್ದಾರೆ. ಎಂದು ಸಚಿವರು ಉತ್ತರಿಸಿದರು.