ವಾಲ್ಪಾಡಿ ಮಾಡದಂಗಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಉಚಿತ ಪಠ್ಯಪುಸ್ತಕ ದಾನಿ ಶಶಿಧರ ದೇವಾಡಿಗ ಅವರು ನೀಡಿದ ಕೊಡೆಗಳು ಹಾಗೂ ದಾನಿ ಅಬೂಬಕ್ಕರ್ ಶಿರ್ತಾಡಿ ಅವರು ನೀಡಿದ ನೋಟ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದರು.
ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಶಾಲೆಗೆ ತನ್ನಲ್ಲಾಗುವ ಸಹಕಾರ ನೀಡುವುದಾಗಿ ಹೇಳಿದ ಶಾಸಕ ಕೋಟ್ಯಾನ್, ಸರಕಾರಿ ಶಾಲೆಗಳು ಉಳಿದು ಬೆಳೆಯಲು ಊರವರು,ದಾನಿಗಳ ನೆರವು ಕೂಡಾ ಅತ್ಯಗತ್ಯ ಎಂದರು.
ಗ್ರಾ.ಪಂ.ಸದಸ್ಯ ಗಣೇಶ್ ಬಿ.ಅಳಿಯೂರು,ದಾನಿ ಶಶಿಧರ ದೇವಾಡಿಗ, ಗ್ರಾ.ಪಂ.ಮಾಜಿ ಸದಸ್ಯ ಲಕ್ಷ್ಮಣ ಸುವರ್ಣ, ಉದ್ಯಮಿ ಸುಕೇಶ್ ಶೆಟ್ಟಿ ಶಿರ್ತಾಡಿ,ಮುಖ್ಯೋಪಾಧ್ಯಾಯಿನಿ ವಾಣಿಶ್ರೀ, ಸಹಶಿಕ್ಷಕಿ ರಶ್ಮಿ,ಎಸ್.ಡಿ.ಎಮ್.ಸಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಅಂಗನವಾಡಿ ಶಿಕ್ಷಕಿ ಸುನೀತಾ,ವಾಲ್ಪಾಡಿ ಫ್ರೆಂಡ್ಸ್ ನ ಹಸನಬ್ಬ,ಎಸ್.ಡಿ.ಎಂ.ಸಿ.ಸದಸ್ಯರು, ವಾಲ್ಪಾಡಿ ಫ್ರೆಂಡ್ಸ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಗೌರವಿಸಲಾಯಿತು.