ದಾವಣಗೆರೆ-ಸೆಪ್ಟೆಂಬರ್,
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ದೂರ ಮಾಡಲು, ಪರಿಜ್ಞಾನ ಮೂಡಿಸಲು, ಕೆಲವು ಸಮಸ್ಯೆಗಳ ಪರಿಹಾರಕ್ಕಾಗಿ ನಾಡಿನ ಖ್ಯಾತ ಮಾನಸಿಕ ವೈದ್ಯರು, ಚಂದನ ವಾಹಿನಿಯಲ್ಲಿ “ಥಟ್ ಅಂತ ಹೇಳಿ” ಕಾರ್ಯಕ್ರಮ ನಡೆಸಿಕೊಡುವ ಡಾ. ನಾ.ಸೋಮೇಶ್ವರರವರು ರಚಿಸಿದ “ಕಲಿಕೆ ಓದು ನೆನಪು” ಪುಸ್ತಕ ಪ್ರಕಟವಾಗಿದ್ದು ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಆಸಕ್ತರು ಈ ಪುಸ್ತಕ ಪಡೆಯಬಹುದು ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಿಳಿಸಿದ್ದಾರೆ. “ಕಲಿಕೆ ಓದು ನೆನಪು” ಪುಸ್ತಕ ಓದಿದಾಗ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚುತ್ತಿದೆ ಮತ್ತು ಮಾನಸಿಕವಾಗಿ ಮಕ್ಕಳು ಪರೀಕ್ಷೆ ಬರೆಯಲು ಪೂರ್ಣಪ್ರಮಾಣದ ಪೂರ್ವ ಸಿದ್ಧರಾಗುತ್ತಾರೆ. ಈ ಪುಸ್ತಕಕ್ಕಾಗಿ 9538732777 ಈ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.