ಕಟೀಲು : ಕೊಡೆತ್ತೂರು ಭರತ್ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಸುಮಾರು ರೂ44 ಸಾವಿರ ಮೌಲ್ಯದ ಪುಸ್ತಕಗಳನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀಡಲಾಯಿತು. ಶರತ್ ಶೆಟ್ಟಿ ಕೊಡೆತ್ತೂರು, ಅರ್ಚಕ ವೆಂಕಟರಮಣ ಆಸ್ರಣ್ಣ, ಮುಖ್ಯ ಶಿಕ್ಷಕರಾದ ಸರೋಜಿನಿ, ಚಂದ್ರಶೇಖರ ಭಟ್ ಮತ್ತಿತರರಿದ್ದರು.
ರೇವತಿ ಚೌಟ ಸ್ಮರಣಾರ್ಥ ಪುಸ್ತಕ
ಕಟೀಲು ಶಿಕ್ಷಣ ಸಂಸ್ಥೆಯ ವಿದ್ಯಾಥಿಗಳಿಗೆ ರೇವತಿ ಚೌಟರ ಸ್ಮರಣಾರ್ಥ ಸುಮಾರು 30 ರೂಪಾಯಿಯ ಬರೆಯುವ ಪುಸ್ತಕವನ್ನು ನೀಡಲಾಯಿತು.
ದಾನಿ ರಾಘವ ಚೌಟ, ಕಟೀಲು ದೇಗುಲದ ಅರ್ಚಕ ಗೋಪಾಲಕೃಷ್ಣ ಆಸ್ರಣ್ಣ, ಕಟೀಲು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಚಂದ್ರಶೇಖರ ಭಟ್, ರಾಜಶೇಖರ ಎನ್, ಸರೋಜಿನಿ ಉಪಸ್ಥಿತರಿದ್ದರು. ಶಿಕ್ಷಕ ಕೃಷ್ಣ ಕೆ. ನಿರೂಪಿಸಿದರು. ಶಿಕ್ಷಕಿ ಪಲ್ಲವಿ ವಂದಿಸಿದರು.