Thursday, July 25, 2024
Homeಮಂಗಳೂರುಹರಿಪಾದ ಶ್ರೀ ಜಾರಂತಾಯ ಯುವಕ, ಯುವತಿ ಮಂಡಲದ ಆಶ್ರಯದಲ್ಲಿ ಪುಸ್ತಕ ವಿತರಣೆ, ಎಸ್ ಎಸ್ ಎಲ್...

ಹರಿಪಾದ ಶ್ರೀ ಜಾರಂತಾಯ ಯುವಕ, ಯುವತಿ ಮಂಡಲದ ಆಶ್ರಯದಲ್ಲಿ ಪುಸ್ತಕ ವಿತರಣೆ, ಎಸ್ ಎಸ್ ಎಲ್ ಸಿ, ಪಿಯುಸಿ ಸಾಧಕರಿಗೆ ಸನ್ಮಾನ

ಪಂಜ ಕೊಯಿಕುಡೆ : ಹರಿಪಾದ ಶ್ರೀ ಜಾರಂತಾಯ ಯುವಕ ಮಂಡಲ ಮತ್ತು ಮಹಿಳಾ ಮಂಡಳಿಯ ವತಿಯಿಂದ ಸ್ಥಳೀಯ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಜೂ.2 ಭಾನುವಾರ ನಡೆಯಿತು.

ಯುವಕ ಮಂಡಲದ ಗೌರವ ಸಲಹೆಗಾರರಾದ ವಾಸುದೇವ ಭಟ್ ಪಂಜ ಕಾರ್ಯಕ್ರಮ ಉದ್ಘಾಟಿಸಿದರು. ಕೆಮ್ರಾಲ್ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಪಂಜ, ಯುವಕ ಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಗೌರವ ಸಲಹೆಗಾರರಾದ ಅನಿಲ್ ಅಮೀನ್, ನವೀನ್ ಶೆಟ್ಟಿ ನಲ್ಯಗುತ್ತು, ಯುವರಾಜ್ ಪೂಜಾರಿ, ಮಾಧವ ಪೂಜಾರಿ ಭಂಡಾರ ಮನೆ, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಜಾರಂತಾಯ ಮಹಿಳಾ ಮಂಡಳಿಯ ಅಧ್ಯಕ್ಷೆ ರೇಖಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೊಯಿಕುಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ವೀಣಾ ಕುಮಾರಿ ಇವರಿಗೆ ಸನ್ಮಾನ ನಡೆಸಿದರು.
ಈ ಸಂದರ್ಭದಲ್ಲಿ 1-7 ತರಗತಿವರೆಗಿನ ಸುಮಾರು 120 ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದೊಂದಿಗೆ ಉಚಿತ ಪುಸ್ತಕಗಳನ್ನು ವಿತರಿಸಿದರು. ಅಲ್ಲದೆ 2024-24 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85 ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ನಿರೀಕ್ಷಾ, ವೈಭವ್ ಬಿ. ಪೂಜಾರಿ, ಮಾನಸ, ದೇವಾಂಶು ಕೋಟ್ಯಾನ್ ಉಲ್ಯ, ಪೂಜಾ ಆರ್. ಶೆಟ್ಟಿ, ಮನ್ವಿತ್ ಎನ್. ಪೂಜಾರಿ, ಅನಿರುದ್ಧ ಪಿ. ರಾವ್ ಇವರನ್ನು ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಜಾರಂತಾಯ ಯುವಕ ಮಂಡಲ ಮತ್ತು ಮಹಿಳಾ ಮಂಡಳಿಯ ಸರ್ವ ಸದಸ್ಯರು ಭಾಗವಹಿಸಿದ್ದರು.
ಜಯಲಕ್ಷ್ಮಿ ಮತ್ತು ರೇಖಾ ಪ್ರಾರ್ಥಿಸಿದರು. ಕೀರ್ತನ್ ಸ್ವಾಗತಿಸಿದರು. ಸರಿತಾ ಆರ್. ಶೆಟ್ಟಿ ವಂದಿಸಿದರು.
ಸಂದೀಪ್ ಪೂಜಾರಿ ಕಾರ್ಯಕ್ರಮ ನಿರೂಪಣೆ ಮಾಡಿದರು.

RELATED ARTICLES
- Advertisment -
Google search engine

Most Popular