ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲೆ,ತೋಕೂರು, ಹಳೆಯಂಗಡಿ ಇಲ್ಲಿನ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ,ಬೈಕಂಪಾಡಿ ಇದರ ಸಹಕಾರದಲ್ಲಿ ನೂತನ ಜೆರ್ಸಿ ಮತ್ತು ಪ್ಯಾಂಟ್ ವಿತರಣಾ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೈಕಂಪಾಡಿ ಇದರ ವಲಯ ಸೇನಾನಿ ರೋ||ಗಣೇಶ್ ಎಮ್ ಇವರು ವಿಧ್ಯಾರ್ಥಿಗಳಿಗೆ ನೂತನ ಜೆರ್ಸಿ ಮತ್ತು ಪ್ಯಾಂಟ್ ವಿತರಿಸಿ, ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಫೂರ್ತಿ ಹೆಚ್ಚಿಸಲು ಇಂತಹ ಕಾರ್ಯಕ್ರಮ ಸಹಕಾರಿ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ನ ಅಧ್ಯಕ್ಷರು ರೋ||ಹರೀಶ್ ಬಿ ಶೆಟ್ಟಿ ಮಾತನಾಡಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳೊಂದಿಗೆ ಕ್ರೀಡೆ ಕೂಡ ಮುಖ್ಯ ಎಂದರು. ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಶ್ರೀ ದೀಪಕ್ ಸುವರ್ಣ ಉಪಸ್ಥಿತರಿದ್ದು, ಉತ್ತಮ ಕಾರ್ಯ ಮತ್ತು ಸಮಾಜಮುಖಿ ಕೆಲಸಗಳನ್ನು ಸಂಘಟನೆಗಳು ಮಾಡಬೇಕು ಎಂದು ಹೇಳಿದರು ಹಾಗೂ ರೋಟರಿ ಕ್ಲಬ್ ನ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ 20 ವಿದ್ಯಾರ್ಥಿಗಳಿಗೆ ಜೆರ್ಸಿ ಮತ್ತು ಪ್ಯಾಂಟ್ ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ರೋ||ಶ್ರೀಕಾಂತ್ ಶೆಟ್ಟಿ,ರೋ||ಅಶೋಕ.ಎನ್,ರೋ||ಗಂಗಾಧರ ಕುಳಾಯಿ,ರೋ||ಯೋಗೀಶ್ ನಾಯಕ್,ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವನಿತಾ,ಸಹ ಶಿಕ್ಷಕಿ ಶ್ರೀಮತಿ ಸಿಲ್ವಿಯಾ ಕುಟಿನ್ಹೊ,ಗೌರವ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಎಸ್.ಶೆಟ್ಟಿಗಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಹಾಗೂ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾದ ಶ್ರೀ ರಮೇಶ್ ಕರ್ಕೇರ,ಶ್ರೀ ಸಚಿನ್ ಆಚಾರ್ಯ ಮತ್ತು ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋಧ ದೇವಾಡಿಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವನಿತಾ ಸ್ವಾಗತಿಸಿದರು.ಗೌರವ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಎಸ್ ಶೆಟ್ಟಿಗಾರ್ ವಂದಿಸಿದರು.ಸಹ ಶಿಕ್ಷಕಿ ಶ್ರೀಮತಿ ಸಿಲ್ವಿಯಾ ಕುಟಿನ್ಹೊ ಕಾರ್ಯಕ್ರಮ ನಿರೂಪಿಸಿದರು.
ತೋಕೂರು ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲಾ ವಿದ್ಯಾರ್ಥಿಗಳಿಗೆ ನೂತನ ಜೆರ್ಸಿ ಮತ್ತು ಪ್ಯಾಂಟ್ ವಿತರಣೆ
RELATED ARTICLES