Wednesday, October 9, 2024
Homeಬೆಳ್ತಂಗಡಿಸುರಕ್ಷಾದಲ್ಲಿ ಸಸಿ ವಿತರಣೆ

ಸುರಕ್ಷಾದಲ್ಲಿ ಸಸಿ ವಿತರಣೆ

ಸುರಕ್ಷಾ ದಂತ ಚಿಕಿತ್ಸಾ ಲಯದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯದ 27ನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜುಲೈ 03 ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಸುಮಾರು 50 ಮಂದಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ವಿದ್ಯಾಧರ್ ಅವರಿಗೆ ನೆಲ್ಲಿಕಾಯಿ ಮತ್ತು ಹಲಸಿನಹಣ್ಣಿನ ಗಿಡವನ್ನು ಡಾ ಮುರಲಿ ಮೋಹನ್ ಚೂಂತಾರು ಅವರು ನೀಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಾ ರಾಜಶ್ರೀ ಮೋಹನ್, ದಂತ ಪರಿಚಾರಕಿಯರಾದ ರಮ್ಯಾ, ಚೈತ್ರಾ, ಸುಷ್ಮಿತಾ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು. ಕಳೆದ ಹತ್ತು ವರುಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯ ನಿರಂತರವಾಗಿ ಸಸಿ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ಜೂನ್ ಮತ್ತು ಜುಲೈ ತಿಂಗಳಿಡೀ ಆಚರಿಸುತ್ತಾ ಬಂದಿದೆ.

RELATED ARTICLES
- Advertisment -
Google search engine

Most Popular