ಸದಾ ಒಂದಲ್ಲ ಒಂದು ಸೇವಾಯೋಜನೆಯನ್ನು ನಡೆಸಿಕೊಂಡು, ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ -ಕಂಬಳಬೆಟ್ಟು ಇದರ ಎಂಟನೇ ಸೇವಾಯೋಜನೆಯಾಗಿ, ಅನಾರೋಗ್ಯದಲ್ಲಿರುವ ಉರಿಮಜಲಿನ ನಿವಾಸಿ ಮೋಹಿನಿ ಎನ್ನುವವರಿಗೆ ಅವರ ಚಿಕಿತ್ಸೆಯ ಸಲುವಾಗಿ ಸೇವಾನಿಧಿ ವಿತರಣೆಯನ್ನು ಫಲಾನುಭವಿಗಳ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಜನಾರ್ಧನ ಕಾರ್ಯಡಿ, ಸ್ಥಾಪಕಧ್ಯಕ್ಷರಾದ ಕಾರ್ತಿಕ್ ಶೆಟ್ಟಿ ಮೂಡೈಮಾರು, ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಮೂಡೈಮಾರು, ಅಜಿತ್ ದೇವಸ್ಯ, ಕಾರ್ಯದರ್ಶಿ ಜೈದೀಪ್ ಅಮೈ ಹಾಗೂ ಸದಸ್ಯರು ಉಪಸ್ಥಿತರಿದ್ದರು.