ಮೂಡುಬಿದಿರೆ :ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮೂಡುಬಿದಿರೆ ಮತ್ತು ಸಂತ ಥೋಮಸ್ ವಿದ್ಯಾಸಂಸ್ಥೆಗಳು ಅಲಂಗಾರು ಮೂಡುಬಿದಿರೆ ಇವರ ಸಹಯೋಗದಿಂದ ಅಲಂಗಾರು ಶಾಲಾ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಲಂಗಾರು ಚರ್ಚಿನ ಧರ್ಮ ಗುರುಗಳಾದ ವಾಲ್ಟರ್ ಡಿಸೋಜಾ, ಮಾಜಿ ಸಚಿವರಾದ ಅಭಯ ಚಂದ್ರ ಜೈನ್, ಪುರಸಭಾ ಸದಸ್ಯರಾದ ಪಿ ಕೆ ಥೊಮಸ್, ಮೂಡುಬಿದಿರೆ ಬಿ ಇ ಓ ರಾಜಶ್ರೀ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುನಿಲ್ ಮಿರಂದ, ಶಾಲಾ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.