Tuesday, April 22, 2025
Homeಉಡುಪಿಜಿಲ್ಲಾ ಸಮೀಕ್ಷಾ ಯೋಜನೆ ಬೈಠಕ್

ಜಿಲ್ಲಾ ಸಮೀಕ್ಷಾ ಯೋಜನೆ ಬೈಠಕ್

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾ ಸಮೀಕ್ಷಾ ಯೋಜನಾ ಬೈಠಕ್ ಆರ್. ಕೆ. ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಮುಂಡ್ಕಿನಜಡ್ಡು ಚೇರ್ಕಾಡಿಯಲ್ಲಿ ನಡೆಯಿತು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಪಾಂಡುರಂಗ ಪೈ ಸಿದ್ದಾಪುರ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ವಿದ್ಯಾಭಾರತಿ ಕರ್ನಾಟಕ ಪ್ರಾಂತ ಸಂಘಟನ ಕಾರ್ಯದರ್ಶಿ ಉಮೇಶ ಎಮ್ .ಸರಸ್ವತಿ ವಂದನೆಯ ಮೂಲಕ ದೀಪ ಬೆಳಗಿಸಿ , ಪುಷ್ಪಾರ್ಚನೆ ಮಾಡಿ ಬೈಠಕ್ ಗೆ ಚಾಲನೆ ನೀಡಿದರು.

ಆರ್. ಕೆ . ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರು ಸತೀಶ್ ಪಾಟೀಲ್ , ಸಂಚಾಲಕರು ಮಹೇಶ ಠಾಕೂರ್ , ಉಪಸ್ಥಿತರಿದ್ದರು.ಆರ್ ಕೆ ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಮಂಜುನಾಥ ಪಾಟೀಲ್ , ಸಂಜಯ ಪ್ರಭು , ಉಪಾಧ್ಯಕ್ಷರು ರಾಧಾಕೃಷ್ಣ ಸಾಮಂತ, ದಿನೇಶ್ ಪ್ರಭು ವೆಂಕಟೇಶ ಪ್ರಭು ಕಾರ್ಯದರ್ಶಿ ಅಶೋಕ ಸಾಮಂತ ಉಪಸ್ಥಿತರಿದ್ದರು.

ಬೈಠಕ್ ನ ನಿರ್ವಾಹಣೆಯ ಜೊತೆಗೆ ಪ್ರಾಸ್ತಾವಿಕ ನುಡಿಗಳನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ ಹೈಕಾಡಿ,ಚಾರ ಮಾಡಿದರು.ಸ್ವಾಗತ ಸಂಸ್ಥೆಯ ಮುಖ್ಯೋಪಾಧ್ಯಾರಾದ ಚಂದ್ರಶೇಖರಪ್ಪ ಮಾಡಿದರು.ಕಾರ್ಯಕ್ರಮದ‌ ನಿರೂಪಣೆ ಮುಕ್ತಾ ಆರ್. ನಾಯ್ಕ. ಡ್ಯಯಲ್ ಸ್ಟಾರ್ ಶಾಲೆ ಅಮಾಸೆಬೈಲು , ಸೇವಾಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ,ಸೂರ್ಯಚೈತನ್ಯ ಅಕಾಡೆಮಿ ಸ್ಕೂಲ್ ಕುತ್ಯಾರು , ಶ್ರೀರಾಮ ವಿದ್ಯಾ ಕೇಂದ್ರ ಕೋಡಿ ,ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ , ಸರಸ್ವತಿ ವಿದ್ಯಾಲಯ ಸಿದ್ಧಾಪುರ , ಜನಾರ್ದನ ಶಾಲೆ ಎಳ್ಳಾರೆ , ನಚಿಕೇತ ವಿದ್ಯಾಲಯ ಬೈಲೂರು, ಯು.ಎಸ್. ನಾಯಕ್ ಪ್ರೌಢಶಾಲೆ ಪಟ್ಲ , ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು, ರಾಮಪ್ಪ ಹಿ.ಪ್ರಾ.ಶಾಲೆ. ಪುಲ್ಕೇರಿ,ವಿದ್ಯಾಭಾರತಿ ಶೈಕ್ಷಣಿಕ ಸಂಯೋಜಿತ 13 ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರು , ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸದಸ್ಯರು , ಪದಾಧಿಕಾರಿಗಳು , ವಿಷಯಪ್ರಮುಖರು ಒಟ್ಟು 51 ಮಂದಿ ಉಪಸ್ಥಿತರಿದ್ದರು.

ಸಂಯೋಜಿತ ಸಂಸ್ಥೆಗಳು ವಾರ್ಷಿಕ ವರದಿ ವಾಚಿಸಿದರು. ಮುಂದಿನ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ಪಟ್ಟಿಯನ್ನು ತಯಾರಿಸಲಾಯಿತು.

RELATED ARTICLES
- Advertisment -
Google search engine

Most Popular