ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಮೀಕ್ಷಾ ಯೋಜನ ಬೈಠಕ್ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಅಂಪಾರು ಇಲ್ಲಿನ ಸಭಾಂಗಣದಲ್ಲಿ ನಡೆಯಿತು. ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಂಪಾರು ಇದರ ಖಜಾಂಚಿ ಸುಭಾಶ್ಚಂದ್ರ ಶೆಟ್ಟಿ ಕೊಡ್ಲಾಡಿ ದೀಪ ಬೆಳಗಿಸಿ ಜಿಲ್ಲಾ ಸಮೀಕ್ಷಾ ಯೋಜನಾ ಬೈಠಕ್ ಗೆ ಚಾಲನೆ ನೀಡಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಪಾಂಡುರಂಗ ಪೈ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ವಿದ್ಯಾಭಾರತಿ ಕರ್ನಾಟಕ ಪ್ರಾಂತದ ಸಂಘಟನಾ ಕಾರ್ಯದರ್ಶಿ ಉಮೇಶ್ ಎಂ . ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ ಹೈಕಾಡಿ , ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ್ , ಸಂಜಯ ಗಾಂಧಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಉದಯ್ ಕುಮಾರ್. ಬಿ . ಉಪಸ್ಥಿತರಿದ್ದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ 12 ಸಂಸ್ಥೆಯ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿಯ ಸಕ್ರಿಯ ಸದಸ್ಯರು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು , ಸದಸ್ಯರು, ಜಿಲ್ಲಾ ವಿಷಯ ಪ್ರಮುಖರು ಉಪಸ್ಥಿತರಿದ್ದರು .ಬೈಠಕ್ ನಲ್ಲಿ ಡಿಸೆಂಬರ್ ಮಾಸದಲ್ಲಿ ನಮ್ಮನ್ನು ಅಗಲಿರುವ ಸಂಘ ಪರಿವಾರದ ಕಾರ್ಯಕರ್ತ ಮತ್ತು ರಾಷ್ಟ್ರಸೇವಿಕಾ ಸಮಿತಿ ಉಡುಪಿ ಜಿಲ್ಲೆಯ ಕಾರ್ಯವಾಹ ಪ್ರೇಮ ತಕ್ಕಟ್ಟೆ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬೈಠಕ್ ನಲ್ಲಿ ಶೈಕ್ಷಣಿಕ ವರ್ಷದಲ್ಲಿ ಮಾಡಿದ ಕಾರ್ಯಕ್ರಮಗಳ ಅವಲೋಕನ ಮಾಡಲಾಯಿತು ಮತ್ತು 2024- 25ನೇ ಶೈಕ್ಷಣಿಕ ವರ್ಷದಲ್ಲಿ ಮಾಡಬೇಕಾದಂತ ಕಾರ್ಯಕ್ರಮಗಳ ಪಟ್ಟಿಯನ್ನು ತಯಾರಿಸಲಾಯಿತು.
ಮುಂದಿನ ವರ್ಷ ನಡೆಯುವ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು : ಜಿಲ್ಲಾ ಮಟ್ಟದ ವಿಜ್ಞಾನಮೇಳ, ಗಣಿತ , ವೇದ ಗಣಿತ , ಸಂಸ್ಕೃತಿ ಜ್ಞಾನ ಮಹೋತ್ಸವ, ಯೋಗ ಸ್ಪರ್ಧೆ, ಜಿಲ್ಲಾ ಶೈಕ್ಷಣಿಕ ಸಹಮಿಲನ , ಜಿಲ್ಲಾಮಟ್ಟದ ಕ್ರೀಡಾಕೂಟ , ಯೋಗ ಶಿಕ್ಷಕರಿಗಾಗಿ ಯೋಗ ಶಿಕ್ಷಣ ಶಿಬಿರ , ಪ್ರತಿ ಶಾಲೆಯಲ್ಲಿನ ಎಲ್ಲಾ ಶಿಕ್ಷಕರಿಗೆ ಯೋಗ ಶಿಕ್ಷಣ ತರಬೇತಿ. ಪ್ರತಿ ಶಾಲೆಯಲ್ಲಿ ಮಾತೃಭಾರತಿ ರಚನೆ ಮಾಡುವುದು. ಶಿಕ್ಷಕರ ಜಿಲ್ಲಾ ಮಟ್ಟದ ಕ್ರೀಡಾಕೂಟ ಏರ್ಪಡಿಸುವುದು. ಮಾತೃಭಾರತಿ ಅಧ್ಯಕ್ಷರು, ಕಾರ್ಯದರ್ಶಿಯವರಿಗೆ ತರಬೇತಿ ನೀಡುವುದು. ವಿಜ್ಞಾನ- ಗಣಿತ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಸ್ಪರ್ಧೆಮಾಡುವುದು.
ಬೈಠಕ್ ನಲ್ಲಿ 12ಸಂಸ್ಥೆಗಳಿಂದ 35ಸಂಖ್ಯೆ ಭಾಗವಹಿಸಿದರು. ಸ್ವಾಗತ ಚೈತ್ರ ಯಡಿಯಾಳ್ , ನಿರ್ವಹಣೆ ಮಹೇಶ್ ಹೈಕಾಡಿ ಮಾಡಿದರು.