Friday, February 14, 2025
Homeರಾಷ್ಟ್ರೀಯಸ್ನಾನ ಮಾಡದ ಗಂಡನಿಂದ ಮದುವೆಯಾಗಿ 40 ದಿನದಲ್ಲೇ ಪತ್ನಿಯಿಂದ ಡಿವೋರ್ಸ್‌ಗೆ ಮೊರೆ; ಅಸಲಿಗೆ ಸ್ನಾನ ಮಾಡದಿರುವುದಕ್ಕೆ...

ಸ್ನಾನ ಮಾಡದ ಗಂಡನಿಂದ ಮದುವೆಯಾಗಿ 40 ದಿನದಲ್ಲೇ ಪತ್ನಿಯಿಂದ ಡಿವೋರ್ಸ್‌ಗೆ ಮೊರೆ; ಅಸಲಿಗೆ ಸ್ನಾನ ಮಾಡದಿರುವುದಕ್ಕೆ ಗಂಡನ ಉತ್ತರ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ!

ಸಿಲ್ಲಿ, ಸಿಲ್ಲಿ ಕಾರಣಗಳಿಗೆಲ್ಲಾ ಡಿವೋರ್ಸ್‌ ಮೊರೆ ಹೋಗುವುದು ಇತ್ತೀಚೆಗೆ. ಇಂತಹದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಕಾರಣ ಮಾತ್ರ ವಿಚಿತ್ರವಾಗಿದೆ. ಇತ್ತೀಚಿಗೆ ಮದುವೆಯಾದ ಮಹಿಳೆಯೊಬ್ಬಳು ತನ್ನ ಗಂಡ ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂಬ ಕಾರಣ ನೀಡಿ ಡಿವೋರ್ಸ್‌ ಕೇಳಿದ್ದಾಳೆ. ಮದುವೆಯಾಗಿ ಕೇವಲ 40 ದಿನಗಳಷ್ಟೇ ಕಳೆದು ಹೋಗಿವೆ. ಆದರೆ ಅಷ್ಟರಲ್ಲಿ ಈ ಮಹಿಳೆ ಡಿವೋರ್ಸ್‌ ಕೇಳಿದ್ದಾಳೆ. ಈ 40 ದಿನಗಳಲ್ಲಿ ಈ ಮಹಿಳೆಯ ಗಂಡ ಕೇವಲ 6 ಬಾರಿ ಮಾತ್ರ ಸ್ನಾನ ಮಾಡಿದ್ದಾನಂತೆ. ಹೀಗಾಗಿ ಆಗ್ರಾದ ನವವಿವಾಹಿತೆ ಡಿವೋರ್ಸ್‌ಗಾಗಿ ಅರ್ಜಿ ಹಾಕಿದ್ದಾಳೆ.
ತನ್ನ ಗಂಡನಿಗೆ ಪ್ರತಿದಿನ ಸ್ನಾನ ಮಾಡುವ ಹವ್ಯಾಸವೇ ಇಲ್ಲ. ತನಗೆ ಆತನ ದೇಹದಿಂದ ಕೆಟ್ಟ ವಾಸನೆ ಬರುತ್ತದೆ. ಹೀಗಾಗಿ ನನಗೆ ಈ ಕೊಳಕು ಗಂಡನಿಂದ ಡಿವೋರ್ಸ್ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಈ ಮಹಿಳೆಯನ್ನು ಮದುವೆಯಾದ ಗಂಡ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಾನೆ. ದೇಹದ ವಾಸನೆಯನ್ನು ಹೆಂಡತಿ ತಾಳಲಾರದೇ ಮದುವೆಯಾದ 40ನೇ ದಿನಕ್ಕೆ ತನ್ನ ದಾಂಪತ್ಯ ಜೀವನ ಅಂತ್ಯಗೊಳಿಸಲು ಮುಂದಾಗಿದ್ದಾಳೆ. ಹೆಂಡತಿಯ ಆರೋಪಕ್ಕೆ ಆ ವ್ಯಕ್ತಿ ಕೂಡ ಶಾಕಿಂಗ್ ಉತ್ತರ ಕೊಟ್ಟಿದ್ದಾನೆ. ಫ್ಯಾಮಿಲಿ ಕೋರ್ಟ್‌ ಸಲಹೆಗಾರರ ಪ್ರಶ್ನೆಗೆ ಹೌದು.. ನಾನು ನೀರಿಗೆ ಪವಿತ್ರಾ ಗಂಗಾಜಲ ಹಾಕಿ ವಾರಕ್ಕೊಮ್ಮೆ ಸ್ನಾನ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾನೆ. ಇನ್ನು ಮುಂದೆ ಹೆಂಡತಿಗಾಗಿ ನಾನು ಬದಲಾಗುತ್ತೇನೆ. ದೇಹದ ವಾಸನೆ ತಡೆಯಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದ್ದಾನೆ. ಇಷ್ಟಾದರೂ ಆ ನವವಿವಾಹಿತೆ ಗಂಡನ ಜೊತೆ ಸಂಸಾರ ಮಾಡಲು ನಿರಾಕರಿಸಿದ್ದಾಳೆ.

RELATED ARTICLES
- Advertisment -
Google search engine

Most Popular