ಮೂಲ್ಕಿ: ದೀಪಾವಳಿ ಕತ್ತಲಿನಿಂದ ಬೆಳಕಿನಡೆಗೆ ಅಜ್ಞಾನದಿಂದ ಸುಜ್ಞಾನ ಮೂಡಿಸುವ ಪ್ರಕೃತಿಯನ್ನು ಆರಾಧಿಸುವ ಹಬ್ಬವಾಗಿದೆ ಎಂದು ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಭಂದಕ ಕೆ. ಸತೀಶ್ ಭಂಡಾರಿ ಹೇಳಿದರು.
ಮೂಲ್ಕಿ ಕಾರ್ನಾಡು ಸಿ.ಎಸ್.ಐ ಆಂಗ್ಲ ಮಾದ್ಯಮ ಶಾಲೆಯಲ್ಲಿ ಬುಧವಾರ ನಡೆದ ದೀಪಾವಳಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ದೀಪಾವಳಿ ಕೊಡುಗೆಗಳನ್ನು ನೀಡುವ ಹಬ್ಬವಾಗಿ ಪ್ರಸಿದ್ದಿ ಪಡೆದಿದ್ದು ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸಹಕಾರ ನೀಡುವ ಹಬ್ಬವಾಗಿದೆ ಎಂದರು. ಈ ಸಂದರ್ಭ ಮೂಲ್ಕಿ ಯುನಿಟಿ ಚರ್ಚು ಸಭಾಪಾಲಕ ಸ್ಟೀವನ್ ಸರ್ವೋತ್ತಮ ಆಶೀರ್ವಚನ ನೀಡಿದರು.
ವಿವಿಧ ಸ್ಪರ್ದಾ ವಿಜೇತರನ್ನು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.ಉದ್ಯಮಿ ವಾಸು ಪೂಜಾರಿ ಚಿತ್ರಾಪು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿಎಂ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕವಿತಾ, ಶಾಲಾ ಸಂಚಾಲಕ ರಂಜನ್ ಜತ್ತನ್ನಾ, ಮಾಜಿ ಸಂಚಾಲಕ ಪ್ರೊ. ಸ್ಯಾಮ್ ಮಾಬೆನ್,ಮುಖ್ಯೋಪಾದ್ಯಾಯಿನಿ ಝೀಟಾ ಮೆಂಡೋನ್ಸಾ ಉಪಸ್ಥಿತರಿದ್ದರು. ಬಳಿಕ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ನಡೆದವು