ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ.) ಮೂಡುಬಿದಿರೆ ಮತ್ತು ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ 3ನೇ ವರ್ಷದ ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ ನಡೆಯಲಿದೆ. ಅ.26ರ ಶನಿವಾರ ಸಂಜೆ 4 ಗಂಟೆಯಿಂದ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸ್ಪರ್ಧೆಗಳು ಆರಂಭಗೊಳ್ಳಲಿವೆ. ಆಧುನಿಕ ಗೂಡುದೀಪ, ಸಾಂಪ್ರದಾಯಿಕ ಗೂಡುದೀಪ, ಮಾದರಿ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ ನಡೆಯಲಿದೆ. ಗೂಡುದೀಪ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ 5,000, ದ್ವಿತೀಯ 3,000 ಮತ್ತು ತೃತೀಯ 2,000 ರೂ. ಬಹುಮಾನ ಇರಲಿದೆ. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ 2,000, ದ್ವಿತೀಯ 1,500 ಮತ್ತು ತೃತೀಯ 1,000 ರೂ. ಬಹುಮಾನ ಇರಲಿದೆ. ಸ್ಪರ್ಧಿಗಳು ಅ.24ರ ಸಂಜೆ 5 ಗಂಟೆಯೊಳಗೆ ಹೆಸರು ನೋಂದಾಯಿಸತಕ್ಕದ್ದು.
ಯುವವಾಹಿನಿ ಮೂಡುಬಿದಿರೆ ಘಟಕದ ವತಿಯಿಂದ ಅ.26ರಂದು ದೀಪಾವಳಿ ಪ್ರಯುಕ್ತ ಗೂಡುದೀಪ, ರಂಗೋಲಿ ಸ್ಪರ್ಧೆ
RELATED ARTICLES