Saturday, December 14, 2024
Homeಮೂಡುಬಿದಿರೆಮೂಡುಬಿದಿರೆ | ಜವನೆರ್‌ ಬೆದ್ರ ಫೌಂಡೇಶನ್‌ ವತಿಯಿಂದ ನ.3ರಂದು ಏಳನೇ ವರ್ಷದ ದೀಪಾವಳಿ ಸಂಭ್ರಮ

ಮೂಡುಬಿದಿರೆ | ಜವನೆರ್‌ ಬೆದ್ರ ಫೌಂಡೇಶನ್‌ ವತಿಯಿಂದ ನ.3ರಂದು ಏಳನೇ ವರ್ಷದ ದೀಪಾವಳಿ ಸಂಭ್ರಮ

ಮೂಡುಬಿದಿರೆ: ಜವನೆರ್‌ ಬೆದ್ರ ಫೌಂಡೇಶನ್‌ (ರಿ.) ಅರ್ಪಿಸುವ ಏಳನೇ ವರ್ಷದ ದೀಪಾವಳಿ ಸಂಭ್ರಮ ನ.3ರ ಭಾನುವಾರ ಸಂಜೆ 4 ಗಂಟೆಗೆ ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ. ಆ ಪ್ರಯುಕ್ತ ಭರತನಾಟ್ಯ ವಿದುಷಿ ಹಾಗೂ ಸಂಗೀತ ಕಲಾವಿದರು, ಆದಿ ಕಲ್ಚರಲ್‌ ಅಕಾಡೆಮಿ ಮತ್ತು ಅವರ ಬಳಗದ ಸ್ಥಾಪಕರು ಸುಮನಾ ಪ್ರಸಾದ್‌ ಬಳಗದಿಂದ ಭಕ್ತಿಗಾನ ಸಿಂಚನ ದೇವರ ನಾಮ ಸಂಕೀರ್ತನೆ ನಡೆಯಲಿದೆ.
ನಂತರ ಗೂಡುದೀಪ ಸ್ಪರ್ಧೆ ನಡೆಯಲಿದೆ. ಸಂಜೆ 4 ಗಂಟೆಯಿಂದ ಸ್ಪರ್ಧೆ ಆರಂಭಗೊಂಡು 5 ಗಂಟೆಯೊಳಗೆ ಗೂಡುದೀಪ ನಿಗದಿಪಡಿಸಿದ ಜಾಗದಲ್ಲಿ ಅಳವಡಿಸಬೇಕು. ನ.1ರೊಳಗೆ ಸ್ಪರ್ಧೆಗೆ ಹೆಸರು ನೋಂದಾಯಿಸಬೇಕು. ಇದೇ ವೇಳೆ ರಂಗೋಲಿ ಸ್ಪರ್ಧೆಯೂ ನಡೆಯಲಿದೆ. ನಂತರ ಯೋಧ ನಮನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಬೆದ್ರ ಫೌಂಡೇಶನ್‌ನ ಅಧ್ಯಕ್ಷ ಅಮರ್‌ ಕೋಟೆ, ಸಂಚಾಲಕ ನಾರಾಯಣ ಪಡುಮಲೆ, ಜವನೆರ್‌ ಬೆದ್ರ ರಕ್ತ ನಿಧಿ ಸಂಚಾಲಕ ಮನು ಎಸ್‌.ಒಂಟಿಕಟ್ಟೆ ಇವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES
- Advertisment -
Google search engine

Most Popular