Monday, December 2, 2024
Homeಮಂಗಳೂರುವೈದ್ಯರ ನಡೆ ಕಾಡಿನ ಕಡೆ – ಉಚಿತ ಆರೋಗ್ಯ ತಪಾಸಣಾ ಶಿಬಿರ

ವೈದ್ಯರ ನಡೆ ಕಾಡಿನ ಕಡೆ – ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು ಸಪ್ಟೆಂಬರ್ 11: ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಆಶ್ರಯದಲ್ಲಿ
“ವೈದ್ಯರ ನಡೆ ಕಾಡಿನ ಕಡೆ” ಎಂಬ ವಿಶಿಷ್ಟ ಉಚಿತ ಆರೋಗ್ಯ ತಪಾಸಣಾ ಶಿಬಿರವು ತಾ: 09-09-2024
ರಂದು ಬೆಳ್ತಂಗಡಿ ತಾಲೂಕಿನ ಅರಣ್ಯ ಪ್ರದೇಶದ ಕಡಿರುದ್ಯಾವರ ನಿವಾಸಿಗಳಾದ ಹಿಂದುಳಿದ ಬುಡಕಟ್ಟು
ಜನಾಂಗದ ಆರೋಗ್ಯ ತಪಾಸಣಾ ಶಿಬಿರವು ಮಹಿಳಾ ಮಂಡಲದ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ
ಸಂಘದ ಕಾರ್ಯದರ್ಶಿ ಡಾ. ಅವಿನ್ ಆಳ್ವ ನೇತೃತ್ವದಲ್ಲಿ ಜರಗಿತು. ನೂರಾರು ಅರಣ್ಯ ನಿವಾಸಿಗಳು ಈ
ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದರು. ಈ ಶಿಬಿರದ
ಉದ್ಘಾಟನೆಯನ್ನು ಇತಪ್ಪ ಮಲೆಕುಡಿಯ ನೆರವೇರಿಸಿದರು. ಈ ಶಿಬಿರದಲ್ಲಿ ಕುಮಾರಿ ಬಿಬಿನ್, ಪ್ರವೀಣ್,
ದೀಕ್ಷಿತ ಮತ್ತು ಮಿಥುನ್ ಸಹಾಯಕರಾಗಿ ಸೇವೆ ಸಲ್ಲಿಸಿದರು.

ವಿದ್ಯಾ ಸರಸ್ವತಿ ಮಂಡಲದ ಅಧ್ಯಕ್ಷೆ ಲೋಕೇಶ್ವರಿ ಸ್ವಾಗತಿಸಿದರು, ಮಾನಸ ಸಮಾಜದ ಅಧ್ಯಕ್ಷ ನೇಮಿರಾಜ್
ವಂದಿಸಿದರು. ಈ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಸ್ಥಳೀಯ ವಿದ್ಯಾ ಸರಸ್ವತಿ ಮಹಿಳಾ ಮಂಡಲ ಮತ್ತು
ವಿದ್ಯಾ ಸರಸ್ವತಿ ಸ್ವ ಸಹಾಯ ಸಂಘ ಕಡಿರುದ್ಯಾವರ ಸಹಯೋಗ ನೀಡಿದ್ದರು.

RELATED ARTICLES
- Advertisment -
Google search engine

Most Popular