Saturday, November 2, 2024
Homeಉಡುಪಿದೊಡ್ಡಣಗುಡ್ಡೆ: ಗಂಡಸಿನ ಅಸ್ಥಿಪಂಜರ ಪತ್ತೆ

ದೊಡ್ಡಣಗುಡ್ಡೆ: ಗಂಡಸಿನ ಅಸ್ಥಿಪಂಜರ ಪತ್ತೆ

ಉಡುಪಿ; ಮೂಡುಸಗ್ರಿ ಶ್ರೀ ಆದಿಶಕ್ತಿ ದೇವಸ್ಥಾನದ ಸನಿಹದ ಮನೆಯ ಹಿಂಭಾಗದಲ್ಲಿ ಗಂಡಸಿನ ಅಸ್ಥಿಪಂಜರವು ಪತ್ತೆಯಾಗಿದೆ.

ಮೃತ ವ್ಯಕ್ತಿಯ ಗುರುತುಪತ್ತೆಯಾಗಿಲ್ಲ. ವ್ಯಕ್ತಿ ಮೃತಪಟ್ಟು ತಿಂಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಸಾವಿನ ಕಾರಣ ತಿಳಿದುಬಂದಿಲ್ಲ. ರಾತ್ರಿಯ ಸಮಯದಲ್ಲಿ ಘಟನಾ ಸ್ಥಳದಲ್ಲಿ ಮಹಜರು ಪ್ರಕ್ರಿಯೆಗಳು ಪೋಲಿಸರಿಂದ ನಡೆದ ಬಳಿಕ ಕಳೇಬರವನ್ನು ಮಣಿಪಾಲ ಕೆ.ಎಂ.ಸಿ ವೈದ್ಯಕೀಯ ಪರೀಕ್ಷಾ ಘಟಕಕ್ಕೆ ಸಾಗಿಸಲಾಯಿತು.

ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಅಸ್ಥಿಪಂಜರದ ಸಾಗಟ ನಡೆಸಲು ಇಲಾಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಿ ನೆರವಾದರು. ಅಸ್ಥಿ ಪಂಜರ ಪತ್ತೆಯಾಗಿರುವ ಸ್ಥಳದ ಮಾಲಿಕರು ಮುಂಬೈಯಲ್ಲಿ ವಾಸವಾಗಿದ್ದು, ಊರಿಗೆ ಬಂದಾಗ ಅವರಿಗೆ ಘಟನೆ ಕಂಡುಬಂದಿದೆ.

RELATED ARTICLES
- Advertisment -
Google search engine

Most Popular