ಮುಂಬೈ: ಸಾಕು ನಾಯಿಗಳು ಕೆಲವರಿಗೆ ತುಂಬಾ ಅಚ್ಚುಮೆಚ್ಚು. ಅದೆಷ್ಟರ ಮಟ್ಟಿಗೆ ಎಂದರೆ ಅವುಗಳಿಗಾಗಿ ಏನನ್ನಾದರೂ ಮಾಡಲು ಸಿದ್ಧರಿರುತ್ತಾರೆ. ಮನೆಯ ಸದಸ್ಯರಂತೇ ಅವುಗಳನ್ನು ಪ್ರೀತಿಸುತ್ತಾರೆ. ನಾಯಿಗಳೂ ಅಂತಹವರಿಗೆ ತಮ್ಮ ನಿಯತ್ತನ್ನು ಕೊನೆವರೆಗೂ ಕಾಪಾಡಿಕೊಂಡು ಬರುತ್ತವೆ. ಮುಂಬೈಯಲ್ಲಿ ಮಹಿಳೆಯೊಬ್ಬರು ತಮ್ಮ ಪ್ರೀತಿಯ ನಾಯಿಯ ಹುಟ್ಟು ಹಬ್ಬಕ್ಕೆ ಬರೋಬ್ಬರಿ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಉಡುಗೊರೆ ನೀಡಿ ಸುದ್ದಿಯಾಗಿದ್ದಾರೆ.
ಸರಿತಾ ಸಲ್ದಾನಾ ಎಂಬವರು ತಮ್ಮ ಸಾಕು ನಾಯಿ ಟೈಗರ್‌ಗೆ 2.5 ಲಕ್ಷ ಮೌಲ್ಯದ ಚಿನ್ನದ ಸರ ಉಡುಗೊರೆಯಾಗಿ ನೀಡಿದ್ದಾರೆ. ನಾಯಿಯ ಹುಟ್ಟು ಹಬ್ಬಕ್ಕಾಗಿ ಅವರು ಈ ಉಡುಗೊರೆ ನೀಡಿ ಸಂಭ್ರಮಿಸಿದ್ದಾರೆ.
ಚೆಂಬೂರಿನ ಅನಿಲ್ ಜ್ಯುವೆಲ್ಲರ್ಸ್ ಎಂಬ ಆಭರಣ ಮಳಿಗೆಯು ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊ ಹಂಚಿಕೆಯಾಗಿದೆ. ಸಲ್ದಾನ ತಮ್ಮ ನಾಯಿಗೆ ವಿಡಿಯೊ ಹಾಕುತ್ತಿರುವ ದೃವ್ಯ ವಿಡಿಯೊದಲ್ಲಿ ದಾಖಲಾಗಿದೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ…