ವಯನಾಡ್: ಇದಂತೂ ಕರಳು ಕಿತ್ತುಬರುವ ದೃಶ್ಯ. ಸಾಕು ನಾಯಿಯೊಂದು ಅವಶೇಷಗಳಡಿ ಸಿಲುಕಿ ಪ್ರಾಣ ಭಿಕ್ಷೆಗಾಗಿ ಬೊಗಳುತ್ತಿರುವ ಮನಕಲಕುವ ದೃಶ್ಯವೊಂದು ಕೇರಳದ ವಯನಾಡ್ ಭೂ ಕುಸಿತವಾದ ಪ್ರದೇಶದಲ್ಲಿ ಕಂಡುಬಂದಿದೆ. ಭೂ ಕುಸಿತದಲ್ಲಿ ಮಣ್ಣಿನಡಿ ಸಿಲುಕಿದ್ದು ಮನುಷ್ಯರಷ್ಟೇ ಅಲ್ಲ, ಸಾಕು ಪ್ರಾಣಿಗಳೂ ಇವೆ. ಸಾಕಷ್ಟು ಪ್ರಾಣಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ, ಅಸಂಖ್ಯಾತ ಪ್ರಾಣಿಗಳು ನೆಲದಡಿ ಹೂತು ಹೋಗಿವೆ. ಬದುಕುಳಿದಿರುವ ಜನರ ಪ್ರೀತಿಗೆ ಪಾತ್ರವಾಗಿದ್ದ ಕೆಲವು ಸಾಕು ಪ್ರಾಣಿಗಳು ಅಕ್ಷರಶಃ ಅನಾಥವಾಗಿವೆ.
ಇಂದು ಮಣ್ಣಿನ ಅವಶೇಷಗಳಡಿ ಸಿಲುಕಿದ್ದ ಎರಡು ನಾಯಿ ಮರಿಗಳನ್ನು ರಕ್ಷಣಾ ತಂಡಗಳು ರಕ್ಷಿಸಿವೆ. ಈ ನಡುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ನಾಯಿಯೊಂದು ಅವಶೇಷಗಳಡಿ ಸಿಲುಕಿ, ಕುತ್ತಿಗೆ ಮಾತ್ರ ಹೊರ ಚಾಚಿ ಬೊಗಳುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿತ್ತು. ನಾಯಿ ಬೊಗಳುವ ಸದ್ದು ಕೇಳಿ ಅಲ್ಲಿಗೆ ಹೋದ ರಕ್ಷಣಾ ಸಿಬ್ಬಂದಿ ನಾಯಿಯನ್ನು ರಕ್ಷಿಸಿದ್ದಾರೆ. ನಾಯಿ, ನಾಯಿ ಮರಿಗಳು ಬದುಕಿ ಬಂದ ವಿಡಿಯೋಗಳು ಮನಕಲಕುವಂತದ್ದಾಗಿವೆ.
ವೀಡಿಯೊ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…