Saturday, July 20, 2024
Homeತುಳು ಭಾಷೆನಿಜವಾದ ಜ್ಯೋತಿಷಿ ಶ್ರೀಡೊಂಬಯ್ಯ ಪಂಡಿತರ 2024ರ ಲೋಕಸಭೆ ಚುನಾವಣೆಯ ಭವಿಷ್ಯ: ನಾಡಿನೆಲ್ಲೆಡೆಯಿಂದ ಅಚ್ಚರಿ, ಶ್ಲಾಘನೆ

ನಿಜವಾದ ಜ್ಯೋತಿಷಿ ಶ್ರೀಡೊಂಬಯ್ಯ ಪಂಡಿತರ 2024ರ ಲೋಕಸಭೆ ಚುನಾವಣೆಯ ಭವಿಷ್ಯ: ನಾಡಿನೆಲ್ಲೆಡೆಯಿಂದ ಅಚ್ಚರಿ, ಶ್ಲಾಘನೆ

ಮಂಗಳೂರು: ಚುನಾವಣಾ ಪೂರ್ವ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಶ್ರೀ ಡೊಂಬಯ್ಯ ಪಂಡಿತರ ಚುನಾವಣಾ ಫಲಿತಾಂಶ ನಿಜವಾಗಿದೆ. ಕೇವಲ ಒಂದು ಹೊತ್ತು ಮಾತ್ರ ಫಲಾಹಾರ ಸೇವಿಸಿ ದಿನದ 24 ಗಂಟೆಯೂ ಉಪವಾಸ,ಯೋಗ, ಧ್ಯಾನದಲ್ಲಿರುವ ನಾಡಿನ ಖ್ಯಾತ ಜ್ಯೋತಿಷ್ಯರೂ, ಆಯುರ್ವೇದಿಕ್ ಪಂಡಿತರೂ, ಸಮಾಜ ಸೇವಕರೂ, ಪ್ರಗತಿ ಪರ ಕೃಷಿಕರೂ ಆಗಿರುವ ಜ್ಯೋತಿಷಿ ಶ್ರೀ ಡೊಂಬಯ್ಯ ಪಂಡಿತರು 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ನುಡಿದಿದ್ದ ಭವಿಷ್ಯ ಕೊನೆಗೂ ನಿಜವಾಗಿದ್ದು ನಾಡಿನಾದ್ಯಂತ ಮತ್ತೊಮ್ಮೆ ಅಚ್ಚರಿ ಮತ್ತು ಶ್ಲಾಘನೆಗೆ ಕಾರಣವಾಗಿದೆ.

 ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನವೇ ಜ್ಯೋತಿಷಿ ಶ್ರೀ ಡೊಂಬಯ್ಯ ಪಂಡಿತರು ಪ್ರತೀ ಅಭ್ಯರ್ಥಿಗಳ ರಾಜಯೋಗ ಬಲ, ಗ್ರಹ, ರಾಶಿ, ನಕ್ಷತ್ರ, ಸಂವತ್ಸರಗಳ ಆಧಾರವನ್ನಿಟ್ಟು ಪರಿಶೋಧನೆ ನಡೆಸಿ 2024ರ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆ ಹೀನಾಯ ಸೋಲುಂಟಾಗಿ ಬಿಜೆಪಿ ಅಭ್ಯರ್ಥಿ ಭರ್ಜರಿ ಬ್ರಿಜೇಶ್ ಚೌಟ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.

 ಅದೇ ರೀತಿ ಕೇಂದ್ರದಲ್ಲೂ ಬಿಜೆಪಿ ಜಯಗಳಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಯಾಗಲಿದ್ದಾರೆ ಎಂದು ಅವರು ಹೇಳಿದ್ದರು. ಇದರಂತೆ ಈಗಾಗಲೇ 2024ರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಈ ಫಲಿತಾಂಶವು ಜ್ಯೋತಿಷಿ ಶ್ರೀ ಡೊಂಬಯ್ಯ ಪಂಡಿತರು ನುಡಿದಿದ್ದ ಭವಿಷ್ಯದಂತೆ ನಿಜವಾಗಿದೆ. ಇದು ನಾಡಿನಾದ್ಯಂತ ಅಚ್ಚರಿ ಹಾಗೂ ಶ್ಲಾಘನೆಗೆ ಪಾತ್ರವಾಗಿದೆ.

RELATED ARTICLES
- Advertisment -
Google search engine

Most Popular