Wednesday, October 9, 2024
Homeಅಪರಾಧವರದಕ್ಷಿಣೆಯ ವಿಚಾರ : ಹೆಂಡತಿಯ ಮುಂದೆ ಅವಳ ಅಣ್ಣನ ಕೊಂದ ಗಂಡ

ವರದಕ್ಷಿಣೆಯ ವಿಚಾರ : ಹೆಂಡತಿಯ ಮುಂದೆ ಅವಳ ಅಣ್ಣನ ಕೊಂದ ಗಂಡ

ಮೈಸೂರು; ಗಂಡ ವರದಕ್ಷಿಣೆ ತರುವಂತೆ ಕಿರುಕುಳ ಕೊಡ್ತಿದ್ದಾನೆ ಅಂತ ತಂಗಿ ಕರೆ ಮಾಡಿದ್ದಳು.. ಇದ್ರಿಂದ ಅಣ್ಣ ಸ್ಥಳಕ್ಕೆ ಹೋಗಿದ್ದ.. ತಂಗಿಯ ಗಂಡನಿಗೆ ಬುದ್ಧಿವಾದ ಹೇಳಿದ್ದ.. ಇದಕ್ಕೆ ಸಿಟ್ಟಿಗೆದ್ದ ಆಸಾಮಿ ಹೆಂಡತಿ ಎದುರೇ ಆಕೆಯ ಅಣ್ಣನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ..

ಮೈಸೂರಿನ ಕುವೆಂಪುನಗರದಲ್ಲಿ ಈ ಕೃತ್ಯ ಎಸಗಲಾಗಿದೆ.. ಅಭಿಷೇಕ್ (27) ಕೊಲೆಯಾದವನು . ರವಿಚಂದ್ರ ಕೊಲೆ ಮಾಡಿದ ಆರೋಪಿ. ಬಾವ ಮತ್ತು ಬಾಮೈದ ನಡುವೆ ವರದಕ್ಷಿಣೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಈ ಕೊಲೆಯಾಗಿದೆ.

ಆರೋಪಿ ರವಿಚಂದ್ರ ಜಿಮ್ ತೆರೆಯಲು 5 ಲಕ್ಷ ಹಣ ಕೇಳಿದ್ದ. ಪ್ರತಿನಿತ್ಯ ಪತ್ನಿ ವಿದ್ಯಾಗೆ ವರದಕ್ಷಿಣೆ ತರುವಂತೆ ರವಿಚಂದ್ರ ಕಿರುಕುಳ ನೀಡುತ್ತಿದ್ದ. ಇದರಿಂದ ನೊಂದ ವಿದ್ಯಾ ಅಣ್ಣನಿಗೆ ಕರೆ ಮಾಡಿದ್ದಾಳೆ. ವಿದ್ಯಾ ಅಣ್ಣ ಅಭಿಷೇಕ್ ಮನೆಗೆ ಬರುತ್ತಿದ್ದಂತೆ ಬಾಗಿಲು ಹಾಕಿ ರವಿಚಂದ್ರ ಏಕಾಏಕಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಅಭಿಷೇಕ್ ತಾಯಿ ಭಾಗ್ಯಮ್ಮ, ತಂಗಿಗೂ ಹಲ್ಲೆ ನಡೆಸಿದ್ದಾನೆ.
ವರದಕ್ಷಿಣೆ ಕೊಟ್ಟು 4 ವರ್ಷಗಳ ಹಿಂದೆ ಅದ್ದೂರಿಯಾಗಿ ವಿದ್ಯಾ-ರವಿಚಂದ್ರ ಮದುವೆ ಮಾಡಿದ್ದರು. 6 ತಿಂಗಳ ಬಳಿಕ ಮತ್ತೆ ವರದಕ್ಷಿಣೆ ತರುವಂತೆ ರವಿಚಂದ್ರ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ..

RELATED ARTICLES
- Advertisment -
Google search engine

Most Popular