Monday, July 15, 2024
Homeರಾಜ್ಯಡಾ| ಎ. ವಿ. ಬಾಳಿಗಾ ಆಸ್ಪತ್ರೆ ಹಾರಾಡಿ ಇಲ್ಲಿನ ಆಶ್ರಯ ಹಿರಿಯ ‌ನಾಗರಿಕ ನಿವಾಸದಲ್ಲಿ ಭಜನೆ...

ಡಾ| ಎ. ವಿ. ಬಾಳಿಗಾ ಆಸ್ಪತ್ರೆ ಹಾರಾಡಿ ಇಲ್ಲಿನ ಆಶ್ರಯ ಹಿರಿಯ ‌ನಾಗರಿಕ ನಿವಾಸದಲ್ಲಿ ಭಜನೆ , ಸನ್ಮಾನ

ಡಾ| ಎ. ವಿ.  ಬಾಳಿಗಾ ಆಸ್ಪತ್ರೆ ಹಾರಾಡಿ ಇಲ್ಲಿನ  ಆಶ್ರಯ ಹಿರಿಯ ‌ನಾಗರಿಕ ನಿವಾಸ  ಹಾರಾಡಿಯಲ್ಲಿ ಶುಕ್ರವಾರ ಸಂಜೆ ಶ್ರೀ ಮಹಾಮಾಯಿ ಭಜನಾ ಮಂಡಳಿ ಈಶ್ವರ ನಗರ ಮಣಿಪಾಲ ಇದರ ಅಧ್ಯಕ್ಷರಾದ ಮಾಯಾ ಕಾಮತ್ ರವರ ಮಾರ್ಗದರ್ಶನದಲ್ಲಿ ಭಜನಾ ತರಬೇತಿ ಮತ್ತು ಭಜನಾ ಕಾರ್ಯಕ್ರ್ರಮವನ್ನು ಭಾಗಿರಥಿ ಕಿಣಿ  ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಬಾಳಿಗ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಶ್ರೀಯುತ ಕರುಣಾಕರ್ ಶೆಟ್ಟಿ,  ಆಶ್ರಯ ಸಂಸ್ಥೆಯ ಸಂಯೋಜಕಾರದ ಶ್ರೀಯುತ ಗಣೇಶ್ ಕೋಟ್ಯಾನ್ ಆಶ್ರಯದ ವಾರ್ಡನ್ ಅಕ್ಷತಾ, ಹಾಗೂ ಭಜನಾ ತಂಡದ ಸದಸ್ಯರು, ಆಶ್ರಮ, ನಿವಾಸಿಗಳು ಉಪಸ್ಥಿತರಿದ್ದರು. ಬಾಳಿಗ ಸಂಸ್ಥೆಯ ಸಮುದಾಯದ ಕಾರ್ಯನಿರ್ವಾಹಕರು ಸುರೇಶ್ ಎಸ್. ನಾವೂರು ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಭಜನಾ ಮಂಡಳಿಯ ಮಾಯಾ ಕಾಮತ್ , ರಮ್ಯಾ ಮಲ್ಯ ಕುಂದಾಪುರ , ಭಾಗೀರಥಿ ಕಿಣಿ ಮಣಿಪಾಲ ರವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಹಾಮಾಯಿ ಭಜನಾ ಮಂಡಳಿ  ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

RELATED ARTICLES
- Advertisment -
Google search engine

Most Popular