ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ದ್ದೊಡ್ಡಣಗುಡ್ಡೆ, ಉಡುಪಿ. ಇಲ್ಲಿ ಮೂತ್ರಪಿಂಡದ ತೊಂದರೆಗೆ ಒಳಗಾಗಿರುವವರಿಗೆ ಡಯಾಲಿಸಿಸ್ ಸ್ವಾಲಭ್ಯ ಏಪ್ರಿಲ್ 26, 2025 ರಿಂದ ಆರಂಭವಾಗಲಿದೆ.
ಈ ಯೋಜನೆಗೆ ಇನ್ವೆಂಜರ್ ಟೆಕ್ನಾಲಜೀಸ್ ಪ್ರೈವೇಟ್‌ಗೆ ಲಿಮಿಟೆಡ್, ಮಂಗಳೂರು, ತಮ್ಮ CSR ಉಪಕ್ರಮದ ಭಾಗವಾಗಿ 2 ಅತ್ಯಾಧುನಿಕ ಡಯಾಲಿಸಿಸ್ ಯಂತ್ರವನ್ನು ಉದಾರವಾಗಿ ದೇಣಿಗೆ ನೀಡಿರುತ್ತಾರೆ.
ಈ ನೂತನ ಡಯಾಲಿಸಿಸ್ ಘಟಕದ ಸಂಕೇತಿಕ ಉದ್ಘಾಟನೆಯನ್ನು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಶನಿವಾರದಂದು ನೇರೆವೇರಿಸಿರುತ್ತಾರೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಇನ್ವೆಂಜರ್ ಟೆಕ್ನಲೋಜಿಸ್ ಪ್ರೈ.ಲಿ., ಮಂಗಳೂರು ಇದರ ಪದಾಧಿಕಾರಿಗಳಾದ ಶ್ರೀ ಕೃಷ್ಣ ಮೋಹನ್ ಪೈ, ಸತ್ಯೇಂದ್ರ ಪೈ ಹಾಗೂ ಧರ್ಮೇಂದ್ರ ಮಲ್ಯ ಅವರು ಭಾಗವಹಿಸಿದ್ದರು.
ಡಯಾಲಿಸಿಸ್ ಕೇಂದ್ರದಲ್ಲಿ ಸಲಹೆ ಮತ್ತು ಚಿಕಿತ್ಸೆಗೆ ಡಾ. ಮೇಘಾಪೈ ನೆಫ್ರಾಲಜಿಸ್ಟ್ ಇವರು ಲಭ್ಯರಿರುತ್ತಾರೆ, ರೋಗಿಗಳಿಗೆ ಅಗತ್ಯವಿರುವ ರಕ್ತ ಪರೀಕ್ಷೆಗಳು ಲಭ್ಯವಿದೆ.
ಈ ಡಯಾಲಿಸಿಸ್ ಸೇವೆಯು ಅಗತ್ಯವಿರುವವರು ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯಲ್ಲಿ ಹೊಸದಾಗಿ ಆರಂಭಿಸಿರುವ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಆಸ್ಪತ್ರೆಯ ದೂರವಾಣಿ ಸಂಖ್ಯೆ :- 08202535299/9242821215 ಸಂರ್ಪಕಿಸಬಹುದು